ಸಮೂಹ ಮಾಧ್ಯಮಗಳ ಕುರಿತಾಗಿ ಒಂದಷ್ಟು ಚಿಂತನೆ, ವಿಶ್ಲೇಷಣೆ ನಡೆಸಿರುವ ಪದ್ಮನಾಭ ಅವರು ಮಾಧ್ಯಮದ ಪ್ರಚಲಿತ ಸ್ಥಿತಿಗತಿಯ ಕುರಿತು ನೇರವಾಗಿ ವಿವರಿಸುವಂತಹ ಪ್ರಯತ್ನ ಮಾಡಿದ್ದಾರೆ. ಈ ಶ್ರಮದ ಫಲವೇ ದಿಗ್ದರ್ಶಕ ಧ್ವನಿ. ಇಂದಿನ ಮಾಧ್ಯಮಗಳು ಸಾಗುತ್ತಿರುವ ಹಾದಿಯ ಬಗ್ಗೆ ಉದಾಹರಣೆಗಳೊಂದಿಗೆ ಲೇಖಕರು ವಿವರಿಸಿದ್ದಾರೆ. ನೂರಾರು ಕನಸು ಹೊತ್ತು ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ಭಾವಿ, ಹಾಲಿ ಪತ್ರಕರ್ತರು ಇಂದಿನ ಸಮೂಹ ಮಾಧ್ಯಮಗಳ ಕುರಿತು ಅರ್ಥ ಮಾಡಿಕೊಳ್ಳಲು ಈ ಕೃತಿಯನ್ನೂ ಓದಲೇಬೇಕಿದೆ.
’ಪ್ರಜಾಪ್ರಭುತ್ವದ ಕುರಿತು ಪ್ರಸ್ತಾಪಿತವಾದ ಬಹುಮುಖ್ಯ ಚಿಂತನೆಯ ಈ ಪುಸ್ತಕ ಸಕಾಲಿಕವಾದದ್ದು ಹಾಗೂ ಸಮಾಜಮುಖಿ ಕಳಕಳಿಯ ಉದ್ದೇಶದ್ದು ಎಂಬುದನ್ನು ಸ್ಪಷ್ಟ ಪಡಿಸುತ್ತದೆ ಎನ್ನುತ್ತಾರೆ’ ಭಾಸ್ಕರ ಹೆಗ್ಗಡೆ ಅವರು.
©2024 Book Brahma Private Limited.