’ಆಂದೋಲನ’ ಪತ್ರಿಕೆಯ ಮೂಲಕ ನಾಡಿನ ಕಣ್ಮಣಿಯಾದವರು ರಾಜಶೇಖರ ಕೋಟಿ. ಸೂಕ್ಷ್ಮತೆ, ಸಂವೇದನೆಗಳ ಮೂರ್ತರೂಪದಂತಿದ್ದ ರಾಜಶೇಖರ ಕೋಟಿ ಪತ್ರಿಕೆಯ ಮೂಲಕ ರೂಪಿಸಿಕೊಂಡ ಓದುಗ ವರ್ಗ ಕೂಡ ಅಪಾರ.
ಹೆಸರಿಗೆ ಪ್ರಾದೇಶಿಕ ಪತ್ರಿಕೆಯಾದರೂ ’ಆಂದೋಲನ’ ಆ ಮಿತಿಯನ್ನು ಮೀರಿತ್ತು. ತಮ್ಮ ನಿಷ್ಠುರತೆ, ಪ್ರಾಮಾಣಿಕತೆಯ ಮೂಲಕ ಮಾದರಿಯಾಗಿದ್ದ ಅವರನ್ನು ಈ ಹೊತ್ತಿಗೆ ಮೂಲಕ ಮೈಸೂರು ಪತ್ರಕರ್ತರ ಸಂಘ ವಿಶಿಷ್ಟವಾಗಿ ನೆನೆದಿದೆ. ಕೋಟಿ ಅವರ ಅಂಕಣ ಬರಹಗಳನ್ನು ಕೂಡ ಕೃತಿ ಒಳಗೊಂಡಿದ್ದು ಅವರ ಲೇಖನಿಯ ಶೈಲಿಯನ್ನು ಸವಿಯಲು ಸಾಧ್ಯವಿದೆ.
ಪತ್ರಿಕೋದ್ಯಮ ವಿದ್ಯಾರ್ಥಿಗಳಂತೂ ಓದಲೇಬೇಕಾದ ಉಪಯುಕ್ತ ’ಪಠ್ಯೇತರ’ ಕೃತಿ ಇದು.
©2025 Book Brahma Private Limited.