ವಿಜ್ಞಾನ ತಂತ್ರಜ್ಞಾನ

Author : ಟಿ. ಆರ್. ಅನಂತರಾಮು

Pages 714

₹ 650.00




Year of Publication: 2014
Published by: ಕನ್ನಡ ಸಾಹಿತ್ಯ ಪರಿಷತ್ತು
Address: # ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

ಆಧುನಿಕ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಇಡೀಯಾಗಿ ಅಂದರೆ ಒಟ್ಟು 17 ಸಂಪುಟಗಳಲ್ಲಿ ಕಟ್ಟಿಕೊಡುವ ಕನ್ನಡ ಸಾಹಿತ್ಯ ಪರಿಷತ್ತಿನ ಕಳಕಳಿಯ ಭಾಗವಾಗಿ 14ನೇ ಸಂಪುಟವಾಗಿ ಪ್ರಕಟಿತ ಗ್ರಂಥವಿದು-ವಿಜ್ಞಾನ-ತಂತ್ರಜ್ಞಾನ. ವಿವಿಧ ವಿಜ್ಞಾನ ಬರಹಗಾರರಿಂದ ಬರೆಯಿಸಲಾಗಿದೆ. ಲೇಖಕ ಟಿ.ಆರ್. ಅನಂತರಾಮು ಸಂಪಾದಕರು. ಪುಂಡಲೀಕ ಹಾಲಂಬಿ ಪ್ರಧಾನ ಸಂಪಾದಕರು. ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಸಾಹಿತ್ಯವೂ ವಿಫುಲವಾಗಿದೆ. ನಿಘಂಟು, ವಿಜ್ಞಾನ ಪದಕೋಶಗಳು ಪ್ರಕಟವಾಗಿದ್ದು, ವಿಜ್ಞಾನದ ಅಂಕಣಗಳು, ಬರಹಗಳು, ಪರಿಸರ, ಕೃಷಿ, ಜೀವವಿಜ್ಞಾನ, ಜನಾಂದೋಲನ, ಕಲಾಮಾಧ್ಯಮದಲ್ಲಿ ವಿಜ್ಞಾನ, ವಿಜ್ಞಾನ ಪ್ರಸಾರಗಳು, ವಿಜ್ಞಾನ ಪತ್ರಿಕೆಗಳು ಇತ್ಯಾದಿ ಹೀಗೆ ವಿಷಯ ಸಂಗ್ರಹವಿದೆ. ಕನ್ನಡದ ಬ್ಲಾಗ್ ಗಳು, ವಿಕಿಪಿಡಿಯಾ, ಸಾಮಾಜಿಕ ಜಾಲತಾಣಗಳು, ಕಣಜ, ಜ್ಞಾನಕೋಶ, ಅಂತರ್ಜಾಲ ಪತ್ರಿಕೆಗಳು ಹೀಗೆ ಗುಣಮಟ್ಟದ ಬರಹಗಳು ಈ ಕೃತಿಯ ಔನ್ನತ್ಯವನ್ನು ಹೆಚ್ಚಿಸಿವೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books