ಶೈಲಿಶಾಸ್ತ್ರ

Author : ಕೆ.ವಿ. ನಾರಾಯಣ

Pages 76

₹ 20.00




Year of Publication: 1990
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು - 560001

Synopsys

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ’ಶೈಲಿಶಾಸ್ತ್ರ’ ಪುಸ್ತಕವು ಸಾಹಿತ್ಯ ಪಾರಿಭಾಷಿಕ ಮಾಲೆ ಸರಣಿಯ ಪುಸ್ತಕ  ಪ್ರಕಟಣೆಯಲ್ಲಿ ವಿಮರ್ಶಕ ಗಿರಡ್ಡಿ ಗೋವಿಂದರಾಜ ಸಂಪಾದಕತ್ವದಲ್ಲಿ ಹೊರಬಂದ ಪುಸ್ತಕವಾಗಿದೆ.

ಖ್ಯಾತ ವಿಮರ್ಶಕರಾದ ಕೆ.ವಿ ನಾರಾಯಣ ಅವರ ’ಶೈಲಿಶಾಸ್ತ್ರ’ ಪುಸ್ತಕವು ಸಾಹಿತ್ಯ ಅಧ್ಯಯನದ ಉತ್ತಮ ಪರಾಮರ್ಶನ ಕೃತಿಯಾಗಿದೆ. ’ಶೈಲಿ’ ಎನ್ನುವುದಕ್ಕೆ ವಿಶಿಷ್ಟ ಲಕ್ಷಣ ಎಂಬ ಸಾಮಾನ್ಯ ಅರ್ಥವಿದೆ. ಭಾಷಿಕನೊಬ್ಬ ಸಾಮುದಾಯಿಕವಾದ ಒತ್ತಡಗಳಿಲ್ಲದಿದ್ದರೂ, ತನ್ನ ಭಾಷಾಬಳಕೆಯಲ್ಲಿ ಮಾಡಿಕೊಳ್ಳುವ ನಿರ್ದಿಷ್ಟವಾದ , ನಿಯಮಿತವಾದ ಪಲ್ಲಟಗಳನ್ನು ’ಶೈಲಿ’ ಎಂದು ತಿಳಿಯಬಹುದು. 

ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ’ಶೈಲಿ ವಿಜ್ಞಾನ’ ಮತ್ತು ’ಶೈಲಿಶಾಸ್ತ್ರ’ ಎಂಬ ಎರಡು ಪ್ರಯೋಗಗಳ ಬಳಕೆ, ಸಾಹಿತ್ಯ ಶೈಲಿಯ ಲಕ್ಷಣ, ಶೈಲಿಯ ಪಾರಂಪರಿಕ ಚಿಂತನೆ, ಶೈಲಿಶಾಸ್ತ್ರದ ವ್ಯಾಪ್ತಿ, ಸಾಹಿತ್ಯ ಶೈಲಿಯೊಳಗಿನ ಭಾಷಾಶಾಸ್ತ್ರದ ಚಿಂತನೆಗಳು, ಶೈಲಿಯಲ್ಲಿನ ಕಾವ್ಯ ಭಾಷೆ, ಕಥನ ಶೈಲಿ, ನಾಟಕೀಯ ಶೈಲಿ, ಶೈಲಿಶಾಸ್ತ್ರದ ಮಿತಿಗಳು, ಇವೆಲವನ್ನೂ ಸ್ಥೂಲವಾಗಿ ಅಧ್ಯಯನ ಮಾಡಲು ’ಶೈಲಿಶಾಸ್ತ್ರ’ ಕೃತಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ.

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books