ಸರಳ ಸಂಸ್ಕೃತ ವ್ಯಾಕರಣ

Author : ಚಂದ್ರಮೌಳಿ ಎಸ್. ನಾಯ್ಕರ್

Pages 234

₹ 120.00




Year of Publication: 2023
Published by: ಪಿ.ಸಿ ಶಾಬಾದಿಮಠ ಬುಕ್ ಡಿಪೋ
Address: ಸ್ಟೇಶನ ರೋಡ್ ಗದಗ

Synopsys

ಚಂದ್ರಮೌಳಿ ಎಸ್. ನಾಯ್ಕರ ಅವರ ‘ಸರಳ ಸಂಸ್ಕೃತ ವ್ಯಾಕರಣ’ ಕೃತಿಯು ವ್ಯಾಕರಣ ಕುರಿತ ವಿಚಾರಗಳನ್ನು ಒಳಗೊಂಡಿದೆ. ಸಂಸ್ಕೃತ ವರ್ಣಮಾಲೆ, ಸಂಧಿ ನಿಯಮಗಳು, ಶಬ್ಧರೂಪವಾಲಿ, ಅನಿಯತ ಶಬ್ಧಗಳು, ಸರ್ವನಾಮ ಶಬ್ಧಗಳು ಸಂಖ್ಯಾವಾಚೀ ಶಬ್ಧಗಳು, ಅವ್ಯಯಗಳು, ಸಮಾಸಗಳು, ಆಧಿಕ್ಯ ಭೋಧನ ವಿಶೇಷಗಳು, ಸ್ತ್ರೀವಾಚಕ ಪ್ರತ್ಯಯಗಳು, ತದ್ಧಿತ ಪ್ರತ್ಯಯಗಳು, ಕ್ರಿಯಾಪದಗಳು, ಪ್ರಯೋಗಗಳು, ಕೃಂದತಗಳು, ಕಾರಕಗಳು, ವಾಕ್ಯ ವಿಜ್ಞಾನ ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ. ಭಾರತೀಯ ಭಾಷೆಗಳಲ್ಲಿಯೇ ಸಂಸ್ಕೃತ ಭಾಷೆಯೂ ಇತರ ಭಾಷೆಗಳಿಗಿಂತ ಅತೀ ಪ್ರಾಚೀನ ಮತ್ತು ಶ್ರೇಷ್ಠ ಭಾಷೆಯೆಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಎಲ್ಲ, ಭಾಷೆಗಳಲ್ಲಿಯೂ ವರ್ಣ, ಸಂಧಿ, ಸಮಾಸ, ಕಾರಕ ಮೊದಲಾದವುಗಳು ಸಂಸ್ಕೃತ ಭಾಷೆಯಂತೆಯೇ ದೊರೆಯುತ್ತವೆ. ಸಂಸ್ಕೃತ ಭಾಷೆಯನ್ನು ತಿಳಿಯಬೇಕಾದರೆ ಪಾಣಿನಿಯ ವ್ಯಾಕರಣ ಶಾಸ್ತ್ರವನ್ನು ಓದಬೇಕು ಎನ್ನುತ್ತಾರೆ ಇಲ್ಲಿ ಲೇಖಕ. ವರ್ಣಗಳ ಉಚ್ಛಾರದ ಬಗೆಗಿನ ಸೂತ್ರಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

About the Author

ಚಂದ್ರಮೌಳಿ ಎಸ್. ನಾಯ್ಕರ್

ಚಂದ್ರಮೌಳಿ ಎಸ್. ನಾಯ್ಕರ್ ಅವರು ಮೂಲತಃ ಧಾರವಾಡದವರು. ಕರ್ನಾಟಕ ರಾಜ್ಯದ ಸಂಸ್ಕೃತ ವಿವಿ ಕುಲಸಚಿವರಾಗಿದ್ದರು. ಯೋಗ, ಸಂಸ್ಕೃತ ಹಾಗೂ ಪ್ರಾಕೃತಗಳಲ್ಲಿ ಆಸ್ಥೆಯುಳ್ಳವರು. ಅವರ ಸಂಶೋಧನ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರ ಸಂಸ್ಕೃತ ನಾಟಕಗಳು  ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ. ಸಂಸ್ಕೃತ ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿರುವ ವಿಶಿಷ್ಟ ಕೊಡುಗೆಗಾಗಿ ಕೆನಡಾ ದೇಶದ ಸರಸ್ವತಿ ವಿಕಾಸ ಕೆನಡಾ ಸಂಸ್ಥೆಯು 1997ರ ಪ್ರತಿಷ್ಟಿತ ‘ಅಂತಾರಾಷ್ಟ್ರೀಯ ರಾಮಕೃಷ್ಣ ಸಂಸ್ಕೃತ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ: ಒಂದು ಪರಿಚಯ’ ಕೃತಿ ರಚಿಸಿದ್ಧಾರೆ.  ...

READ MORE

Related Books