ಮೈಂ ಅವ್ರ ಮೇರೆ ಲಮ್ಹೆ

Author : ಎಚ್.ಎಸ್. ಮುಕ್ತಾಯಕ್ಕ

₹ 270.00




Year of Publication: 2022
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

ಕವಿ ಎಚ್.ಎಸ್. ಮುಕ್ತಾಯಕ್ಕ ಅವರ ಸಮಗ್ರ ಗಜಲುಗಳ ಸಂಗ್ರಹ ‘ಮೈ ಅವ್ರ ಮೇರೆ ಲಮ್ಹೆ’. ಕನ್ನಡದ ಮೊಟ್ಟ ಮೊದಲ ಗಜಲ್ ಕೃತಿಯಾಗಿ ಕನ್ನಡ ಕಾವ್ಯಲೋಕದ ಚರಿತ್ರೆಯಲ್ಲಿ ಗುರುತಿಸಲ್ಪಟ್ಟಿರುವ ನಲವತ್ತು ಗಜಲುಗಳು ಕೃತಿ ಪ್ರಕಟವಾದ (2002) ಎರಡು ದಶಕಗಳ ನಂತರ ಇದೀಗ (2022) ಗಜಲಿನ ಬಗೆಗೆ ಸ್ಥೂಲ ವಿವರಣೆಯನ್ನೊಳಗೊಂಡು, ಎಚ್.ಎಸ್. ಮುಕ್ತಾಯಕ್ಕ ಹಾಗೂ ಶಾಂತರಸರು ಗಜಲುಗಳ ಬಗೆಗೆ ಬರೆದ ದೀರ್ಘ ಪ್ರಸ್ತಾವನೆ ಮತ್ತು ಎಂ. ಎಸ್. ಆಶಾದೇವಿ ಅವರ ಬೆನ್ನುಡಿಯೊಂದಿಗೆ ಅವರ "ಸಮಗ್ರ ಗಜಲುಗಳ ಸಂಗ್ರಹ"ವನ್ನು ಸಂಗಾತ ಪ್ರಕಾಶನ ಪ್ರಕಟಿಸಿದೆ.

ಕೃತಿಯ ಬೆನ್ನುಡಿಯಲ್ಲಿ ಎಂ. ಎಸ್. ಆಶಾದೇವಿ ಅವರು ಹೇಳಿರುವಂತೆ, ಗಜಲ್ ಪ್ರಕಾರವು ಅತ್ಯಂತ ಆಕರ್ಷಕವಾದುದು. ನಿಜ, ಆದರೆ ಅದು ಎಲ್ಲರಿಗೂ ಒಲಿಯುವುದು ಸಾಧ್ಯವೇ ಇಲ್ಲ. ಆರಂಭದಿಂದ ಕೊನೆಯವರೆಗೂ ತುರೀಯಾವಸ್ಥೆಯ ಅನುರಕ್ತಿಯನ್ನು ಅದು ಬೇಡುತ್ತದೆ. ಸದಾ ಭಾವೋಲಿಪ್ತವಾದ, ಆದರೂ ಹುಸಿಯಾಗದ ಅಪರೂಪದ ಮನಸ್ಥಿತಿಯಿಲ್ಲದಿದ್ದರೆ ಗಜಲುಗಳನ್ನು ಬರೆಯುವುದು ಸಾಧ್ಯವಿಲ್ಲ. ಅಪ್ಪಟ ಗಜಲುಗಳ ಮಾತೇ ಬೇರೆ, ಅವು ಭಾವ ನಾದದ ನದಿಗಳಂತೆ, ಹರಿಯುತ್ತಲೇ ಇರುತ್ತವೆ. ಯಾವ ಊರುಗೋಲುಗಳು ಬೇಡ ಅವುಗಳಿಗೆ ನದಿಯ ಜೀವಂತಿಕೆ, ಮಾರ್ದವ, ಆರ್ತತೆ, ಸೌಂದರ್ಯ, ಸ್ವಚ್ಛಂದತೆ ಎಲ್ಲವೂ ಮಾಂಸಲವಾಗಿ ಓದುಗರನ್ನು ಮುಟ್ಟ ಮೀಯಿಸುತ್ತವೆ.ಈ ಎಲ್ಲವೂ ಮುಕ್ತಾಯಕ್ಕನವರ ಗಜಲ್‌ಗಳಲ್ಲಿ ಇವೆ ಎಂದೇ ಅವು ಕನ್ನಡದ ಕಾವ್ಯಾಸಕ್ತರನ್ನು ಎಂದಿಗೂ ಸೆಳೆದಿವೆ ಎಂದಿದ್ದಾರೆ.

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books