ಕೌತುಕ-ವಿಜ್ಞಾನ

Author : ಆರ್. ಬಿ. ಗುರುಬಸವರಾಜ

₹ 190.00




Year of Publication: 2022
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: #725, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560 010
Phone: 9945939436

Synopsys

ಲೇಖಕ ಆರ್.ಬಿ. ಗುರುಬಸವರಾಜ ಅವರ ವಿಜ್ಞಾನಕ್ಕೆ ಸಂಬಂಧಪಟ್ಟ ಕೃತಿ ʻಕೌತುಕ-ವಿಜ್ಞಾನʼ. ಕ್ಲಿಷ್ಟ ಹಾಗೂ ಸಂಕೀರ್ಣ ಎನಿಸಿಕೊಂಡಿರುವ ವಿಜ್ಞಾನ ವಿಷಯಗಳನ್ನು ಅತ್ಯಂತ ಸರಳವಾಗಿ ಮತ್ತು ಕುತೂಹಲಕರವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ವಿದ್ಯಾರ್ಥಿಗಳಿಗೆ, ತಜ್ಞ ಹಾಗೂ ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆ ಮೂಡಿಸುವ ಮಾಹಿತಿಯುಕ್ತ ಪುಸ್ತಕವಾಗಿದೆ. ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ʻತಿಳಿವಿಜ್ಞಾನʼ ಅಂಕಣಕ್ಕೆ ಗುರುಬಸವರಾಜ ಅವರು ಬರೆಯುತ್ತಿದ್ದ ಸಮಕಾಲೀನ ವಿಜ್ಞಾನ ಬರಹಗಳನ್ನು ಒಟ್ಟು ರೂಪವೇ ಪ್ರಸ್ತುತ ಪುಸ್ತಕ.

About the Author

ಆರ್. ಬಿ. ಗುರುಬಸವರಾಜ
(20 July 1974)

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್.ಬಿ.ಗುರುಬಸವರಾಜ್, ಪ್ರವೃತ್ತಿಯಲ್ಲಿ ಲೇಖಕರು ಹೌದು. ಶಿಕ್ಷಣ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶಿಕ್ಷಣ ಲೇಖನಗಳ ಸಂಗ್ರಹ "ನೀವೂ ಸ್ಟಾರ್ ಆಗಿ", ಶಿಕ್ಷಕರ ಕೈಪಿಡಿ "ಯೋಚನೆ ಬಿಡಿ ಯೋಜನೆ ಮಾಡಿ", ಮಕ್ಕಳ ಕಿರುಕಾದಂಬರಿ "ಪಾಪ್ ಕಾರ್ನ್ ಪಾಪಜ್ಜಿ" ಸಂಪಾದಿತ ಕೃತಿ "ನೆಲದ ಮರೆಯ ನಿಧಾನ" ಎಂಬ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ...

READ MORE

Related Books