ಕನ್ನಡ ವ್ಯಾಕರಣ ಮತ್ತು ಭಾಷೆ

Author : ವ್ಹಿ.ಜಿ.ಪೂಜಾರ

Pages 212

₹ 100.00




Year of Publication: 2008
Published by: ಚೇತನ ಪ್ರಕಾಶನ
Address: ಸರಸ್ವತೀಪುರ, ಕುಸನೂರ ರಸ್ತೆ, ಗುಲಬರ್ಗಾ - 585106

Synopsys

‘ಕನ್ನಡ ವ್ಯಾಕರಣ ಮತ್ತು ಭಾಷೆ’ ಡಾ. ವಿ. ಜಿ. ಪೂಜಾರ ಅವರ ಕೃತಿ. ಇಲ್ಲಿ ಕನ್ನಡ ಭಾಷೆ ಮತ್ತು ವ್ಯಾಕರಣದ ಪಠ್ಯವನ್ನು ಒಟ್ಟಾಗಿ ಅರ್ಥೈಸಲಾಗಿದೆ. ಭಾಷಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿರುವ ಈ ಕೃತಿ ಹೊಸ ಬಗೆಯ ಭಾಷಾ ಬಳಕೆಯ ಸಾಧ್ಯತೆಗಳ ಬಗ್ಗೆ ವಿವರಿಸುತ್ತದೆ.

About the Author

ವ್ಹಿ.ಜಿ.ಪೂಜಾರ

ವ್ಹಿ.ಜಿ. ಪೂಜಾರ ಅವರು ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವರು. ರಾಮದುರ್ಗ ತಾಲ್ಲೂಕಿನ ಪ್ರಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು; ವೀರಶೈವ ಸಾಹಿತ್ಯದಲ್ಲಿ ಪವಾಡ ಕಥೆಗಳು ಎಂಬುದು ಇವರ ಸಂಶೋಧನಾ ಮಹಾಪ್ರಬಂಧ, ಕವಿವಾಣಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳು, ನಿಷ್ಠೆಯ ಕಡಲಪ್ಪ- ವೀರಪ್ಪನವರು, ಸ್ವರವಚನಗಳಲ್ಲಿ ವಿಡಂಬನೆ, ಸಾಹಿತ್ಯ ಸಮಾವೇಶ, ಸಾಹಿತ್ಯ ಮಾರ್ಗ, ಶರಣರ ಎರಡು ನಾಟಕಗಳು, ಕನ್ನಡ ಸಾಹಿತ್ಯ, ಸಾಹಿತ್ಯ ಸಂಬಂಧ, ಶೋಧ, ಸಮೀಕ್ಷೆ, ರಾಮಪುರ ಚಿಕ್ಕಪ್ಪಯ್ಯನ ಸ್ವರ ವಚನ, ತ್ರಿವಿಧಿ, ಸಂಗವಿಭು ಮುಂತಾಗಿ ಅರವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಸಂಪಾದನೆ, ಸಂಶೋಧನೆ, ನಡುಗನ್ನಡ ...

READ MORE

Reviews

ಪುಸ್ತಕ ಪರಿಚಯ: ಕೃಪೆ: ಹೊಸತು 

ಈ ಕೃತಿಯಲ್ಲಿ ಕನ್ನಡ ವ್ಯಾಕರಣ ಮತ್ತು ಕನ್ನಡ ಭಾಷೆಯ ವಿಚಾರವನ್ನು ಮೊದಲಿಗೆ ಒಟ್ಟಿಗೆ ನೀಡಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸುಲಭದಲ್ಲಿ, ಸರಳವಾಗಿ ತಿಳಿಯುವಂತೆ ಸಂಕ್ಷಿಪ್ತವಾಗಿ ವ್ಯಾಕರಣ ಮತ್ತು ಭಾಷಾ ವಿಜ್ಞಾನದಂತಹ ಶಾಸ್ತ್ರಗಳನ್ನು ವಿವರಿಸಲಾಗಿದೆ. 'ವ್ಯಾಕರಣದ ಉದ್ದೇಶವು ಒಂದು ಭಾಷೆಯ ಸಾಧು-ಅಸಾಧು, ದುಷ್ಟ-ಶಿಷ್ಟ ಪ್ರಯೋಗಗಳನ್ನು ನಿರ್ಣಯಿಸಿ, ನಿಯಮಿಸುವುದಾಗಿದೆ' ಎಂಬುದರ ಬದಲಾಗಿ, ನಿಯಮಿಸಿದ್ದನ್ನು ಮುರಿಯುತ್ತಲೇ ಹೊಸ ಬಗೆಯ ಪದರಚನೆ, ವಾಕ್ಯರಚನೆಯ ಪ್ರಯೋಗಗಳು ಮೂಡುತ್ತಿವೆ. ಭಾಷೆ ಮತ್ತು ವ್ಯಾಕರಣ ಕುರಿತ ಸಮರ್ಥವಾದ ವಿಚಾರಗಳನ್ನು ಆಸಕ್ತರೆಲ್ಲರಿಗೂ ತಿಳಿಯುವಂತೆ ಇಲ್ಲಿ ವಿವರಿಸಲಾಗಿದೆ.

Related Books