ಲೇಖಕ ಟಿ.ಎಸ್. ಗೋಪಾಲ ಅವರು ರಚಿಸಿದ ಕೃತಿ-ಕನ್ನಡ ಉಕ್ತಲೇಖನದ ಪಾಠಗಳು. ಶಿಕ್ಷಕರು ಹೇಳುವುದನ್ನು ಕೇಳಿಸಿಕೊಂಡು ಬರೆಯುತ್ತಾ ಹೋಗುವುದು ಉಕ್ತಲೇಖನ. ವಿದ್ಯಾರ್ಥಿಗಳು ಏನು ಕೇಳಿಸಿಕೊಳ್ಳುವರೋ ಅದನ್ನೇ ಬರೆಯುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಶಿಕ್ಷಕರ ಪಾಠಗಳನ್ನು ಕೇಳುತ್ತಿರಬೇಕು. ಕೇಳಿಸಿಕೊಂಡಾದ ಮೇಲೂ ವ್ಯಾಕರಣ ಶುದ್ಧಿ ಕಾಯ್ದುಕೊಂಡು ಬರೆಯಬೇಕು. ಇಂತಹ ಬರಹಗಳ ರೂಢಿ ಕಠಿಣತಮವಾಗಿರುತ್ತದೆ. ಆದರೆ, ವಿದ್ಯಾರ್ಥಿಗಳಲ್ಲಿ ಇಂತಹ ಹವ್ಯಾಸ ರೂಢಿಸಬೇಕು. ಈ ಕುರಿತ ಕೆಲ ಮಹತ್ವದ ಅಂಶಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಉತ್ತಮ ಮಾರ್ಗದರ್ಶಿಯಾಗಿದೆ.
©2024 Book Brahma Private Limited.