ಕನ್ನಡ ಮಧ್ಯಮ ವ್ಯಾಕರಣ

Author : ತೀ.ನಂ.ಶ್ರೀ

Pages 176

₹ 86.00




Year of Publication: 2013
Published by: ಗೀತಾ ಬುಕ್ ಹೌಸ್
Address: ಮೈಸೂರು

Synopsys

ಪಂಪಪ್ರಶಸ್ತಿ ಪುರಸ್ಕೃತ ಕೃತಿ-ಕನ್ನಡ ಮಧ್ಯಮ ವ್ಯಾಕರಣ. ಹಿರಿಯ ಲೇಖಕ -ಚಿಂತಕ ತೀ.ನಂ. ಶ್ರೀಕಂಠಯ್ಯ ಅವರು ಬರೆದಿದ್ದಾರೆ. ಕನ್ನಡ ವ್ಯಾಕರಣ ವಲಯದಲ್ಲಿ ಅತ್ಯುತ್ತಮ ಕೃತಿ ಎಂಬ ಹೆಗ್ಗಳಿಕೆ ಇದೆ. ತೀರಾ ಸರಳ ಭಾಷೆಯಲ್ಲಿ ವ್ಯಾಕರಣದ ಸೂತ್ರಗಳನ್ನು ಹೇಳಲಾಗಿದೆ.

ಈ ಗ್ರಂಥವು ಮೊದಲ ಬಾರಿ ಬೆಂಗಳೂರಿನ ಮೋದಿ ಪವರ್ ಪ್ರೆಸ್ ಪ್ರಕಾಶನದವರು 1949ರಲ್ಲಿ ಪ್ರಕಟಿಸಿದರು. ಮೈಸೂರು ರಾಜ್ಯ ಸರ್ಕಾರವು ಈ ಕೃತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿತ್ತು. ‘ವ್ಯಾಕರಣ ಗ್ರಂಥವು ಕೇವಲ ಸೂತ್ರಗಳ ಪಟ್ಟಿಯಾಗಬಾರದು. ಸೂತ್ರಕ್ಕಿಂತ ಹೆಚ್ಚಾಗಿ ವಿವರಣೆಯೂ ಹಾಘೂ ವಿವರಣೆಗಿಂತ ಹೆಚ್ಚಾಗಿ ಉದಾಹರಣೆಗಳೂ ಇರಬೇಕು. ಇದರಿಂದ, ವ್ಯಾಕರಣ ಗ್ರಹಿಕೆ ಕುರಿತಂತೆ  ವಿದ್ಯಾರ್ಥಿಗಳ ಆಸಕ್ತಿ ಹೆಚ್ಚುತ್ತದೆ. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಗ್ರಂಥ ರಚಿಸಲಾಗಿದೆ’ ಎಂದು ಲೇಖಕರು ಹೇಳಿದ್ದಾರೆ. 

ವಾಕ್ಯ, ಪದ, ವರ್ಣ, ಪ್ರಕೃತಿ, ಪ್ರತ್ಯಯ, ನಾಮಪದ, ಕ್ರಿಯಾಪದ, ಸಂಧಿ, ಲಿಂಗವಚನಗಳು, ಭಾವನಾಮ, ಸಮಾಸ ಇವೇ ಮುಂತಾದ ವ್ಯಾಕರಣದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಯುವಂತೆ ವಿವರಿಸಲಾಗಿದೆ. 

About the Author

ತೀ.ನಂ.ಶ್ರೀ
(26 November 1906 - 07 September 1966)

ತೀ.ನಂ.ಶ್ರೀ ಎಂತಲೇ ಪರಿಚಿತರಾಗಿರುವ ತೀರ್ಥಪುರ ನಂಜುಂಡಯ್ಯನವರ ಮಗ ಶ್ರೀಕಂಠಯ್ಯ ಅವರ ಹುಟ್ಟೂರು ಚಿಕ್ಕನಾಯಕನಹಳ್ಳಿ ಹತ್ತಿರದ ತೀರ್ಥಪುರ. ಮೈಸೂರಿನಲ್ಲಿ ಪದವಿ ಪಡೆದಿದ್ದ ಇವರು ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ಕೇವಲ ಒಂದುವರೆ ತಿಂಗಳು ಮಾತ್ರ ಅಮಾಲ್ದಾರರಾಗಿ ಸೇವೆ ಸಲ್ಲಿಸಿದ್ದ ಅವರು ಕಾಲೇಜಿನ ಅಧ್ಯಾಪಕರಾದರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬರೆದ ಕೃತಿಗಳೆಂದರೆ ಒಲುಮೆ, ಹೆಣ್ಣು ಮಕ್ಕಳ ಪದಗಳು, ಬಿಡಿಮುತ್ತು, ಪಂಪ, ನಂಬಿಯಣ್ಣನರಗಳೆ, ರನ್ನನ ಗದಾಯುದ್ಧ ಸಂಗ್ರಹ, ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಮಾಧ್ಯಮ ವ್ಯಾಕರಣ, ರಾಕ್ಷಸನ ಮುದ್ರಿಕೆ, ನಂಟರು ಇವರ ಪ್ರಮುಖ ಕೃತಿಗಳು. ಇವರು ಬರೆದಿರುವ ಭಾರತೀಯ ...

READ MORE

Related Books