ಕನಕದಾಸರ ಸುಮಾರು ಮುನ್ನೂರಕ್ಕೂ ಹೆಚ್ಚಿನ ಕೀರ್ತನೆಗಳು ಈ ಕೃತಿಯಲ್ಲಿವೆ. ಸಾಮಾನ್ಯ ಓದುಗರಿಗೆ ಸಹಾಯಕವಾಗಲೆಂದು ಲೇಖಕರು ಪ್ರತಿಯೊಂದು ಕೀರ್ತನೆಯ ಭಾವ ಮತ್ತು ಅರ್ಥಗಳನ್ನು ಆಯಾ ಕೀರ್ತನೆಗಳ ಅಡಿಯಲ್ಲಿಯೇ ಕೊಟ್ಟಿದ್ದಾರೆ.
ಈ ಕೃತಿಯಲ್ಲಿ ದೇವತಾಸ್ತುತಿ, ಗುರುಸ್ತುತಿ, ಆತ್ಮಚರಿತ್ರೆ, ಜ್ಞಾನ ಭಕ್ತಿ ವೈರಾಗ್ಯ, ಹರಿಸರ್ವೋತ್ತಮ ಹರಿದಾಸ ಮಹತಿ, ಸಮಾಜ ಚಿಂತನೆ: ನೀತಿ ಬೋಧನೆ, ವೈಚಾರಿಕತೆ, ಕೃಷ್ಣಲೀಲೆ, ದಶಾವತಾರ ಲೀಲೆಗಳು, ತಾತ್ವಕತೆ, ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು, ಅನುಭಾವದ ನಿಗೂಢ ಮುಂಡಿಗೆಗಳು, ಉದಯರಾಗಗಳು, ಉಗಾಭೋಗಗಳು ಹಾಗೂ ಕೀರ್ತನೆಗಳ ಅಕಾರಾದಿಯ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.
©2024 Book Brahma Private Limited.