ಸಮಗ್ರ ದಾಸ ಸಾಹಿತ್ಯ ಸಂಪುಟ- 6 ಭಾಗ 2

Author : ಕೃಷ್ಣ ಕೊಲ್ಹಾರ ಕುಲಕರ್ಣಿ

Pages 368

₹ 60.00




Year of Publication: 2003
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು - 560002

Synopsys

‘ಸಮಗ್ರ ದಾಸ ಸಾಹಿತ್ಯ ಸಂಪುಟ- 6 ಭಾಗ 2’ ಕಾಖಂಡಕಿ ಶ್ರೀ ಮಹಿಪತಿರಾಯರ ಕೀರ್ತನೆಗಳು ಕೃತಿಯನ್ನು ಲೇಖಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು, ಸೇರಿದಂತೆ ಅನುಬಂಧಗಳಲ್ಲಿ ಕಠಿಣಶಬ್ದಗಳ ಅರ್ಥ, ಸಂಖ್ಯಾ ವಿಶಿಷ್ಟ ಪದಗಳು, ವಿಷ್ಣುವಿನ ಅವತಾರಕ್ಕೆ ಸಂಬಂಧಿಸಿದ ಸಾಂದರ್ಭಿಕ ಪೌರಾಣಿಕ ವ್ಯಕ್ತಿಗಳು, ಹಾಗೂ ಕೀರ್ತನೆಗಳ ಆಕಾದಾದಿಗಳು ಸಂಕಲನಗೊಂಡಿವೆ.

About the Author

ಕೃಷ್ಣ ಕೊಲ್ಹಾರ ಕುಲಕರ್ಣಿ
(16 October 1940)

ಕೇಂದ್ರ ಸರ್ಕಾರದ ಪ್ರಸಾರ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ ಅವರು ಇತಿಹಾಸ-ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರು. ಬಿಜಾಪುರ ಜಿಲ್ಲೆಯ ಕೋಲ್ಹಾರದವರಾದ ಅವರು ಕಾದಂಬರಿ, ನಾಟಕ ಜೀವನ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆದಿಲ್‌ ಷಾಹಿ ಕಾಲದ ಪಠ್ಯಗಳ ಕನ್ನಡ ಅನುವಾದ ಯೋಜನೆಯ ಸಂಪಾದಕರಾಗಿದ್ದರು. ಸಿಂದಗಿಯ ಬಿಂದಗಿ, ಕರ್ನಾಟಕ ವೈಭವ ವಾರಪತ್ರಿಕೆ, ಮಾಧ್ವಮಠಗಳು, ಆದಿಲ್‌ಶಾಹಿ ಆಸ್ಥಾನದ ಸಾಹಿತ್ಯ (ಸಂಶೋಧನೆ), ಮಹಿಮಾಪತಿರಾಯರ ಕೀರ್ತನೆಗಳು, ಕೃಷ್ಣದಾಸರ ಕೀರ್ತನೆಗಳು, ತಿಂಮಾಯಣ, ಶ್ರೀಸತ್ಯಧ್ಯಾನದರ್ಶನ (ಸಂಪಾದನೆ), ರತ್ನಾಕರ, ಮನೆ ಮುಳುಗಿತು (ಕಾದಂಬರಿ), ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಪ್ರಕಟಿತ ಕೃತಿಗಳು. ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು (2006).  ...

READ MORE

Related Books