ಲೇಖಕಿಯರಾದ ಡಾ.ಟಿ.ಎನ್. ನಾಗರತ್ನ ಹಾಗೂ ಡಾ.ಮಂದಾಕಿನಿ ಅವರು ಸಂಪಾದಿಸಿರುವ ಕೃತಿ ಹರಿದಾಸರ ಜನಪ್ರಿಯ ಹಾಡುಗಳು. ಕರ್ನಾಟಕ ಸಂಸ್ಕೃತಿ ನಿರ್ದೇಶನಾಲಯದ ಸಹಯೋಗತ್ವದಲ್ಲಿ ಕರ್ನಾಟಕ ಸರ್ಕಾರದಿಂದಲೇ ಪ್ರಕಟವಾದ ಈ ಪುಸ್ತಕದಲ್ಲಿ ಅಪರೂಪದ ಮತ್ತು ಹಲವಾರು ದಾಸರ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಸುಮಾರು ಮುನ್ನೂರಕ್ಕೂಹೆಚ್ಚು ದಾಸರು ಆಗಿಹೋಗಿದ್ದು ಅವರ ಕೀರ್ತನೆಗಳು ಇಪ್ಪತ್ತು ಸಾವಿರಕ್ಕೂ ಹೆಚ್ಚು ಎಂಬ ಮಾಹಿತಿ ಇದೆ. ಹಸ್ತಪ್ರತಿ ರೂಪದಲ್ಲೇ ಉಳಿದು ಕೊಂಡಿದ್ದ ಅನೇಕ ದಾಸವರೇಣ್ಯರ ಕೃತಿಗಳನ್ನು ಜನಸಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಈ ಪುಸ್ತಕ ಪ್ರಕಟಿಸಲಾಗಿದೆ. ಇದರಲ್ಲಿ ಕೀರ್ತನೆಗಳು ,ಅಂಕಿತನಾಮ,ಉಗಾಭೋಗ,ಸುಳಾದಿ, ತಾರತಮ್ಯ,ಪಂಚಬೇದ ಗಳು ಅಂದರೇನು ಎನ್ನುವ ಬಗ್ಗೆ ಲಘು ಟಿಪ್ಪಣಿಗಳು ಕೂಡ ಇವೆ. ಸುಮಾರು ಮುನ್ನೂರು ಕೀರ್ತನೆಗಳ ಸಂಗ್ರಹವಿದೆ. ಅಪರೂಪದ ಕೀರ್ತನೆಗಳನ್ನು ಕಾಣಬಹುದು.ಪುರಂದರದಾಸರಿಂದ ಹಿಡಿದು ಹೆಳವನಕಟ್ಟೆ ಗಿರಿಯಮ್ಮನಂತಹ ಅಪರೂಪದ ದಾಸಸಾಹಿತಿಗಳ ಕಿರು ಪರಿಚಯವಿದೆ.
©2024 Book Brahma Private Limited.