ಲೇಖಕ ಡಾ. ಸುರೇಶ್ ಎಲ್. ಜಾಧವ ಅವರ ಕೃತಿ-ಹರಿದಾಸ ಸಿರಿದೀಪ್ತಿ. 15ನೇ ಶತಮಾನದಲ್ಲಿ ಹರಿದಾಸರು ತಮ್ಮ ನವವಿಧ ಭಕ್ತಿಯಿಂದ ಶ್ರೀಹರಿಯ ಧ್ಯಾನ ಗುಣಗಾನ, ಪಾದಸೇವನ ಹಾಗೂ ಕೀರ್ತನೆಗಳ ಮೂಲಕ ಅಂತರಂಗ-ಬಹಿರಂಗ ಶುದ್ಧಿಗೆ ಮಹತ್ವ ನೀಡಿದ್ದರು. ಶ್ರೀಪಾದರಾಯರಿಂದ ಹಿಡಿದು ಜಗನ್ನಾಥದಾಸರು, ಗೋಪಾಲದಾಸರು, ಹಾಗೂ ವಿಜಯದಾಸರವರೆಗೆ ಹಲವು ಘಟ್ಟಗಳಲ್ಲಿ ದಾಸ ಚಳವಳಿ ಶಕ್ತಿಯುತವಾಗಿ ಪರಿಪುಷ್ಪಗೊಂಡು ಬೆಳೆದಿದೆ.
ಹರಿದಾಸರಿಗೆ ಯಾವುದೇ ಜಾತಿಯ ನಿರ್ಬಂಧನೆಗಳಿರಲಿಲ್ಲ. ಅಲ್ಲಿ ಕನಕದಾಸರಂತಹ ಶ್ರೇಷ್ಠ ಭಕ್ತರು ಹಾಗೂ ರಾಮದಾಸರಂತಹ ಶ್ರೇಷ್ಠ ವಿಜ್ಞಾನಿಗಳು ಅಲ್ಪಸಂಖ್ಯಾತ ವರ್ಗದಲ್ಲಿ ಹುಟ್ಟಿ ವಿಷ್ಣುಮಹಿಮೆ ಹಾಗೂ ದಶಾವತಾರ ಮಹಿಮೆ ಸಾರಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಭಂಡಾರ ಶ್ರೀಮಂತವಾಗಿದೆ. ವಚನ ಹಾಗೂ ದಾಸ ಸಾಹಿತ್ಯಗಳು ವಿಶ್ವದ ಜನತೆಯ ಕಣ್ಣು ತೆರೆಸುತ್ತವೆ.ಇಲ್ಲಿ ವ್ಯಕ್ತಿ ಪರಿಶೋಧನ ಜೊತೆಗೆ ಸಮಾಜದ ಪರಿಶೋಧನೆಗೂ ಮಾರ್ಗ ರೂಪಿತವಾಗಿದೆ. ಅಲ್ಲದೆ, ಹರಿದಾಸ ಸಾಹಿತ್ಯ ವಚನ ಸಾಹಿತ್ಯದoತೆ ತತ್ವ- ಸತ್ವಗಳನ್ನು ಮೈಗೂಡಿಸಿಕೊಂಡಿದ್ದು ಲೋಕಕಲ್ಯಾಣ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ.
ಈ ಕೃತಿಯಲ್ಲಿ ಏಳು ಲೇಖನಗಳಿವೆ. ದಾಸಸಾಹಿತ್ಯದಲ್ಲಿ ಸಮಾಜಮುಖಿ ಧೋರಣೆ, ಹರಿದಾಸ ಸಾಹಿತ್ಯದಲ್ಲಿ ವಿಶ್ವಮಾನವ ಚಿಂತನೆ, ದಾಸ ಸಾಹಿತ್ಯ ಮತ್ತು ಜೀವನ ಮೌಲ್ಯಗಳು,ಕೀರ್ತನ ಸಾಹಿತ್ಯ ಮತ್ತು ಸಂಸ್ಕೃತಿ, ದಾಸಸಾಹಿತ್ಯ :ಸಾಮರಸ್ಯ ಧರ್ಮಸಹಿಷ್ಣುತೆ,ಕೀರ್ತನ ಸಾಹಿತ್ಯ ಮತ್ತು ಭಾಷೆ,ಹಾಗೂ ಕಲ್ಯಾಣ ಕರ್ನಾಟಕದ ಕೀರ್ತನ ಸಾಹಿತ್ಯ,ಎಂಬ ಲೇಖನಗಳನ್ನು ಒಂದು ಕಡೆ ಸಂಕಲಿಸಲಾಗಿದೆ.
©2024 Book Brahma Private Limited.