ಲೇಖಕಿ ಟಿ.ಎನ್. ನಾಗರತ್ನ ಅವರು ಬರೆದ ದಾಸ ಸಾಹಿತ್ಯ ಸೌರಭ ಕೃತಿಯು ದಾಸ ಸಾಹಿತ್ಯ ಅಧ್ಯಯನಯೋಗ್ಯವಾಗಿದೆ. ಸಾಮಾಜಿಕ ಸುಧಾರಣೆಯಲ್ಲಿ ಭಕ್ತಿಪಂಥದ ದಾಸ ಸಾಹಿತ್ಯದ ಪಾತ್ರವೂ ಇದೆ. ದೇವರನ್ನು ಒ;ಲಿಸಿಕೊಳ್ಳುವ ಮಾರ್ಗವನ್ನು ಬೋಧಿಸುತ್ತಲೇ ದಾಸ ಸಾಹಿತ್ಯವು ಜನಮಾನಸದಲ್ಲಿ ಬೇರೂರಿದ್ದ ಜಾತಿ ತಾರತಮ್ಯ, ವೈಮನಸ್ಸು ಹಾಗೂ ಕೋಮುಭಾವನೆಳನ್ನು ನಿರ್ಮೂಲನೆಗೊಳಿಸಲು ಯತ್ನಿಸಿದ್ದನ್ನು ಕಾಣಬಹುದು. ದಾಸ ಸಾಹಿತ್ಯವು ಕೇವಲ ದೇವರ ನಾಮಸ್ಮರಣೆಯಲ್ಲೇ ತೃಪ್ತಿ ಹೊಂದುತ್ತದೆ ಎನ್ನುವುದಕ್ಕಿಂತ, ಸಮಾಜದ ಆರೋಗ್ಯಕ್ಕಾಗಿ ಜನರನ್ನು ತಯಾರುಗೊಳಿಸುತ್ತದೆ. ಈ ನಿಟ್ಟಿನಲ್ಲಿ ದಾಸ ಸಾಹಿತ್ಯದ ಅಧ್ಯಯನ ಇಲ್ಲಿದೆ. ದಾಸ ಸಾಹಿತ್ಯದ ಸೌಂದರ್ಯವನ್ನು ಮನದಟ್ಟು ಮಾಡಿಕೊಡಲಾಗಿದೆ.
©2024 Book Brahma Private Limited.