ಪುರಂದರ ದಾಸ ಸಾಹಿತ್ಯ ಹಾಗೂ ಜೀವನ ದರ್ಶನ ಕುರಿತು ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಬರೆದ ಕೃತಿ-ಪುರಂದರ ಸಾಹಿತ್ಯ-ಜೀವನ ದರ್ಶನ-1'. ಶ್ರೀ ಪುರಂದರ ದಾಸರ 5ನೇ ಶತಮಾನೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಕೃತಿ ಪ್ರಕಟಿಸಿದೆ. ಜಗನ್ನಾಥ ದಾಸರು, ವಿಜಯ ದಾಸರು, ತ್ಯಾಗರಾಜ ದಾಸರು, ಪ್ರಸನ್ನ ವೆಂಕಟ ದಾಸರು ಹೀಗೆ ವಿವಿಧ ದಾಸರ ಮಹಿಮೆಗಳನ್ನು ಬಿಂಬಿಸುವ ಮೊದಲ ಅಧ್ಯಾಯ-ಮಹಿಮಾ ದರ್ಶನ, ನಂತರದಲ್ಲಿ ಪುರಂದರ ದಾಸರ ಸಂಪೂರ್ಣ ಜೀವನದ ಚಿತ್ರಣ ಮತ್ತು ಅರುಣಗಿರಿ, ಅಹೋಬಲ, ಕಂಚಿ, ಉಡುಪಿ, ಬೇಲೂರು, ಭದ್ರಾಚಲ, ಮೇಲುಕೋಟೆ, ಶೃಂಗಾರ ಪುರ, ಹರಿಹರ, ಹಂಪಿ ಹೀಗೆ ಪುರಂದರ ಸುತ್ತಿದ ಕ್ಷೇತ್ರಗಳ ಮಹಿಮೆ ಚಿತ್ರಣ ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.