‘ಪುರಂದರದಾಸರ ಬಂಡಾಯ ಪ್ರಜ್ಞೆ’ ಕೃತಿಯು ಶ್ರೀನಿವಾಸ ಸಿರನೂರಕರ್ ಅವರ ದಾಸ ಲೇಖನಗಳ ಸಾಹಿತ್ಯವಾಗಿದೆ. ವಚನ ಸಾಹಿತ್ಯ, ಹರಿದಾಸ ಸಾಹಿತ್ಯಗಳ ಸೃಷ್ಟಿಯ ಹಿಂದಿನ ಆಶಯಗಳನ್ನೂ ಇಲ್ಲಿನ ಒಂದು ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ. ಪುರಂದರ-ಕನಕರಿಬ್ಬರೂ ವ್ಯಾಸರಾಯರ ನೇತೃತ್ವದಲ್ಲಿ ಸಾಹಿತ್ಯ ಕೃಷಿಯನ್ನು ಆಂದೋಲನದ ರೀತಿಯಲ್ಲಿ ನಡೆಸಿದ್ದನ್ನೂ ಈ ಕೃತಿ ನೆನಪಿಸಿಕೊಡುತ್ತದೆ. ಕೀರ್ತನೆಗಳನ್ನು ಸಂಗೀತಕ್ಕೆ ಅಳವಡಿಸಿಕೊಳ್ಳುವ ಮಾರ್ಗವನ್ನೂ ತೋರಿಸಿ ಕರ್ನಾಟಕ ಸಂಗೀತಕ್ಕೆ ಬುನಾದಿ ಹಾಕಿಕೊಟ್ಟ ಪುರಂದರದಾಸರ ಕೊಡುಗೆಯನ್ನೂ ಇಲ್ಲಿ ನೆನಪಿಸಲಾಗಿದೆ.
©2024 Book Brahma Private Limited.