ಡಾ. ಅರಳುಮಲ್ಲಿಗೆ ಪಾರ್ಥ ಸಾರಥಿ ಅವರು ಪುರಂದರ ದಾಸರ ಹಾಡುಗಳನ್ನು ಸಂಪಾದಿಸಿದ ಕೃತಿ. ಪುರಂದರ ದಾಸರು ದಾಸರಲ್ಲಿಯೇ ಶ್ರೇಷ್ಠರು ಎಂದು ಪರಿಗಣಿಸಲಾಗುತ್ತಿದೆ. ಸಾವಿರಾರು ಹಾಡುಗಳನ್ನು ಅವರು ರಚಿಸಿದ್ದು, ಭಕ್ತಿ ಪ್ರಧಾನವಾಗಿವೆ. ಸಮಾಜ ಸುಧಾರಣೆಯ ಅಂಶಗಳನ್ನು ಹೊಂದಿವೆ. ದೇವರ ನೈಜ ಅಸ್ತಿತ್ವವನ್ನು ತೋರಿಸುವುದಲ್ಲದೇ, ಭಕ್ತಿಯ ಸ್ವರೂಪವನ್ನೂ ಸಹ ಮನವರಿಕೆ ಮಾಡಿಕೊಡುತ್ತವೆ. ದಾಸರ ಬದುಕು-ಬಾಲ್ಯ-ಅವರ ವಿಚಾರ-ಭಾವನೆ-ಸಾಮಾಜಿಕ ಕೊಡುಗೆಗಳ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳೀಗೆ ಹಾಗೂ ದಾಸ ಸಾಹಿತ್ಯ ಆಸಕ್ತರಿಗೆ ಈ ಕೃತಿ ಅತ್ಯಂತ ಉಪಯುಕ್ತವಾಗಿದೆ.
©2025 Book Brahma Private Limited.