ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು;ಒಂದು ಅಧ್ಯಯನ ಕೃತಿಯು ಡಾ. ಆರ್ ಸುನಂದಮ್ಮ ರಚಿಸಿದ್ದು, ತಿರುಮಲ ತಿರುಪತಿ ದೇವಾಸ್ಥಾನದ ಧನಸಹಾಯದಿಂದ ಪ್ರಕಟವಾಗಿದೆ. ಕಾಲ ದೃಷ್ಟಿ ಮತ್ತು ಸಾಹಿತ್ಯ ದೃಷ್ಟಿಯನ್ನಿಟ್ಟುಕ್ಕೊಂಡು ಲೇಖಕಿಯು, ಹತ್ತು ಮಂದಿ ದಾಸರನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ದಾಸಸಾಹಿತ್ಯದ ದೃಷ್ಟಿಯಿಂದ ಗುರುತಿಸಲಾಗಿರುವ ಶ್ರೀಪಾದರಾಜರು ಮತ್ತು ಅವರ ಸಾಹಿತ್ಯವನ್ನು ಇಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಪುರಂದರದಾಸ ಮತ್ತು ಕನಕದಾಸರನ್ನು ಬೆಳೆಸಿ ಅವರಿಗೆ ಪ್ರೋತ್ಸಾಹ ನೀಡಿದ ವ್ಯಾಸರಾಯರ ಸಾಹಿತ್ಯವನ್ನು ಇಲ್ಲಿ ಪ್ರತ್ಯೇಕ ಪರಿಶೀಲನೆಗೆ ಗುರಿಪಡಿಸಲಾಗಿದೆ. ದಾಸರ ರಚನೆಯಲ್ಲಿ ಕಂಡುಬರುವ ಜಾನಪದ ಅಂಶಗಳ ಅಧ್ಯಯನವನ್ನೂ ಕೂಡ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ.
©2025 Book Brahma Private Limited.