ಹಿರಿಯ ಸಾಹಿತಿ ಪ್ರೊ. ಶ್ರೀನಿವಾಸ ಹಾವನೂರ ಅವರ ಕೃತಿ-ಸಮಗ್ರ ಹರಿದಾಸ ವಾಙ್ಮಯ ಕೋಶ. ದಾಸರ ಸಾಹಿತ್ಯವು ಭಕ್ತಿಪ್ರಧಾನವಾದದ್ದು. ಆದರೆ, ಈ ಭಕ್ತಿಯ ಮೂಲಕವೇ ಸಮಾಜವನ್ನು ವ್ಯಂಗ್ಯ ಮಾಡಿ, ವಿಡಂಬಿಸುವ ಮೂಲಕ ದೇವರನ್ನೂ ಪ್ರಶ್ನಿಸುತ್ತಾರೆ. ಮನುಷ್ಯರಿಗೆ ದೇವರ ಹಂಗು ಬೇಕಿಲ್ಲ. ಮಾನವೀಯ ಸೇವೆಯೇ ಪ್ರಮುಖ ಎಂದೆಲ್ಲ ಬೋಧಿಸುವ ದಾಸರ ಭಕ್ತಿಗೀತೆಗಳು ಸಮಾಜ ಸುಧಾರಣೆಯನ್ನು ಜೀವಾಳವಾಗಿಸಿಕೊಂಡಿವೆ. ದಾಸರ ಹಾಡುಗಳ ವಾಙ್ಮಯ ಕೋಶ ಇದಾಗಿದ್ದು, ಕಠಿಣ ಪದಗಳನ್ನು ಓದುಗರಿಗೆ ಸುಲಭವಾಗಿಸುತ್ತದೆ.
©2025 Book Brahma Private Limited.