ದಾಸ ಸಾಹಿತ್ಯ ಎಂದರೆ ಸೊಬಗಿನ ಸೋನೆ. ವಿವೇಕದ ಪಲ್ಲವ. ಪರಮಾತ್ಮನ ಕಾರುಣ್ಯದ ಕೆನೆಮೊಸರು, ಹಾಗೂ ತನಿಬೆಲ್ಲದ ಸವಿಯಾದ ಅನುಭವ. ಈ ಗ್ರಂಥದ ಉದ್ದಕ್ಕೂ ದಾಸರ ಸಾಧನೆಯ ವಿಶ್ಲೇಷಣೆಯ ಸುಧಾ. ಹಾಗಾಗಿಯೇ ಈ ಕೃತಿ ಮಕರಂದ. ಓದುಗರಿಗೆ ಇಲ್ಲಿ ಮಧುಕರ ವೃತ್ತಿಯ ಅನುಭವವಾಗುತ್ತದೆ. ಹತ್ತು ಹಲವು ಲೇಖಕರ ವಿದ್ವತ್ಪೂರ್ಣ ಅಪೂರ್ವ ಸಂಗ್ರಹದ ಭಾಗ 1 ರಲ್ಲಿ 63 ಲೇಖನಗಳು ಹಾಗೂ ಭಾಗ 2 ರಲ್ಲಿ 35 ಲೇಖನಗಳೊಗೊಂಡ ಅಪೂರ್ವ ಸಂಗ್ರಹದ ವಿಶಿಷ್ಟ ಭಂಡಾರವೇ ಈ ಕೃತಿ.
©2024 Book Brahma Private Limited.