ಕನಕದಾಸರ ಸಾಹಿತ್ಯದಲ್ಲಿ ವಿಜಯನಗರ ಸಾಮ್ರಾಜ್ಯ

Author : ರಾಜಶ್ರೀ ಕಿಶೋರ

Pages 141

₹ 120.00




Year of Publication: 2018
Published by: ಸಿರಿಗನ್ನಡಂ ಗೆಲ್ಗೆ ಸಂಸ್ಥೆ ಬೆಂಗಳೂರು

Synopsys

'ಕನಕದಾಸರ ಸಾಹಿತ್ಯದಲ್ಲಿ ವಿಜಯನಗರ ಸಾಮ್ರಾಜ್ಯ' ಡಾ. ರಾಜಶ್ರೀ ಕಿಶೋರ ಅವರು ಬರೆದ ಕನಕ ಸಾಹಿತ್ಯಾವಲೋಕನ ಹಾಗೂ ಸಾಹಿತ್ಯಾಧ್ಯಯನ ಕೃತಿಯಾಗಿದೆ ಭಾರತೀಯ ಭಕ್ತಿಪಂಥದಲ್ಲಿ ಕರ್ನಾಟಕದ ವಚನಕಾರರಿಗೆ ಮತ್ತು ಕೀರ್ತನಕಾರರಿಗೆ ಅಗ್ರಸ್ಥಾನ. ಅದಲ್ಲೂ ವೈಚಾರಿಕ ದೃಷ್ಠಿಯಿಂದ ಸಮಾಜವನ್ನು ವಿಮರ್ಶೆ ಮಾಡುತ್ತಲೇ ಸಾಮಾಜಿಕ ಬದುಕಿನಲ್ಲಿ ಹೊಸ ಚಿಂತನೆಗಳನ್ನು ಬಿತ್ತಿದ ಕನಕದಾಸರಂಥ ಕೀರ್ತನಕಾರರು. ಒಬ್ಬ ಸಮರ್ಥ ಕವಿಯಾಗಿ ಹೆಸರು ಮಾಡಿರುವುದು ಅವರ ವ್ಯಕ್ತಿತ್ವದ ಮತ್ತೊಂದು ಮುಖ. ಮೋಹನತರ೦ಗಿಣಿ, ನಳಚರಿತ್ರೆ, ಹರಿಭಕ್ತಸಾರ, ನೈಸಿಂಹ ಸ್ತುತಿ, ರಾಮಧ್ಯಾನ ಚರಿತೆಗಳಂಥ ಕಾವ್ಯಗಳಲ್ಲಿ ಭಕ್ತಿಗೆ ಪ್ರಾಶಸ್ತ್ರ ನೀಡಲಾಗಿದೆ. ಆ ಭಕ್ತಿ ಕೇವಲ ಧಾತ್ಮಿಕ ವಲಯದಲ್ಲಿ ನಿಲ್ಲದೆ, ಮುಂದುವರೆದು ಸಾಮಾಜೀಕರಣಗೊಳ್ಳುವ ದರ ಮೂಲಕ ಅದು ಕ್ರಿಯಾತ್ಮಕವಾಗಿ, ಜ್ಞಾನಾತ್ಮಾಕವಾಗಿ ಮೋಕ್ಷ ಸಾಧನೆಗೆ ದಾರಿ ಮಾಡಿಕೊಡುವಂತೆ ಚಿತ್ರಣಗೊಂಡಿದೆ. ಹೀಗೆ ಇಂತಹ ಸಂತ ಕವಿ ಕನಕದಾಸರ ಕುರಿತಾದ ಈ ಕೃತಿಯನ್ನು ರಚಿಸಿದ ಡಾ. ರಾಜಶ್ರೀ ಕಿಶೋರ ಅವರನ್ನು ಆರಂಭದಲ್ಲಿಯೇ ಅಭಿನಂದಿಸುತ್ತೇನೆ. ಕನಕದಾಸರ ಸಾಹಿತ್ಯದಲ್ಲಿ ವಿಜಯನಗರ ಸಾಮ್ರಾಜ್ಯ ರಚನೆಯ ದೃಷ್ಠಿಯಿಂದ ಮೂರು ಆಯಾಮಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ 1. ಅವಲೋಕನ 2. ಅಧ್ಯಯನ 3. ಸಂಪಾದನ. ಅವಲೋಕನ ಭಾಗದಲ್ಲಿ ಕನಕದಾಸರ ಜೀವನ ಹಾಗೂ ಕಾವ್ಯಗಳನ್ನು ಪರಿಚಯಿಸಲಾಗಿದೆ. ಕನಕದಾಸರ ಕೃತಿಗಳಲ್ಲಿ ನಿರೂಪಿತ ವಾಗಿರುವ ಸರಳತೆ, ದೇಶೀಯತೆ, ತಾತ್ವಿಕತೆ ಹಾಗು ಕಾವ್ಯಾತ್ಮಕ ಗುಣಗಳನ್ನು ಡಾ. ರಾಜಶ್ರೀ ಅವರು ಸಾಧಾರಪೂರ್ವಕವಾಗಿ ವಿಶ್ಲೇಷಿದ್ದಾರೆ. ಇನ್ನೂ ಅಧ್ಯಯನ ಭಾಗ ವಾದ ಎರಡರಲ್ಲಿ ಕನಕದಾಸರ ಕಾವ್ಯಗಳಲ್ಲಿ ವಿಜಯನಗರ ಸಾಮ್ರಾಜ್ಯದ ಉಲ್ಲೇಖನ ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಒಡೋಲಗ, ಪಕ್ವಾನ್ನಗಳು, ಗೋಷ್ಠಿಗಳು, ಓಕಳಿಯಾಟ, ಆಭರಣಗಳು, ಯುದ್ಧಗಳು ಹಾಗೂ ಯುದ್ಧದ ಸಿದ್ಧತೆಗಳನ್ನು ಕುರಿತು ಪ್ರಸ್ತಾಪಿಸಿದ ಸಂಗತಿಗಳನ್ನು ಒಂದು ಕಡೆ ಚರ್ಚಿಸಿರುವುದು ಕನ್ನಡ ಕಾವ್ಯಗಳಲ್ಲಿ ಕಂಡುಬರುವ ಸಾಂಸ್ಕೃತಿಕ ಆಚರಣೆಗಳನ್ನು ಪರಿಶೋಧಿಸುವ ಸಾಧ್ಯತೆಗಳನ್ನು ಎತ್ತಿಹೇಳಲಾಗಿದೆ. ಅದೇ ರೀತಿ ಕನಕಸಾಹಿತ್ಯದಲ್ಲಿ ಜಾನಪದ ಆಶಯಗಳನ್ನು ಹಾಗೂ ಒಳನೋಟಗಳನ್ನು ಸಮೀಕ್ಷಿಸಲಾಗಿದೆ. ಕೊನೆಯದಾಗಿ ಮೂರನೆಯ ಸಂಪಾದನ ಭಾಗದಲ್ಲಿ ಕನಕದಾಸರ ಮಹತ್ವದ ಕೀರ್ತನೆಗಳನ್ನು, ಗೀಗೀ ಪದಗಳನ್ನು ಹಾಗೂ ಮುಂಡಿಗೆಗಳನ್ನು ಸಂಪಾದಿಸಿಕೊಡಲಾಗಿದೆ. ಹೀಗೆ ಚಿಕ್ಕದಾದ ಕೃತಿಯಲ್ಲಿ ಕನಕ ಸಾಹಿತ್ಯ ದರ್ಶನವನ್ನು ಮತ್ತು ಕನಕದಾಸರ ವ್ಯಕ್ತಿತ್ವವನ್ನು ಅತ್ಯಂತ ಸಮರ್ಥವಾಗಿ ಡಾ. ರಾಜಶ್ರೀ ಕಿಶೋರ ಅವರು ಪರಿಚಯಿಸಿದ್ದಾರೆ. ಈಗಾಗಲೇ ಹೃದಯಾ- ಮೃತಧಾರೆ (ಕವನ ಸಂಕಲನ), ದೇವಸೂಗೂರಿನ ನಾಗರ ಎಲ್ಲಮ್ಮ, ದೀಪ್ತಿದರ್ಶಿನಿ, ದೇವಸೂಗೂರಿನ ಶ್ರೀ ಸೂಗೂರೇಶ್ವರರು (ಸಂಶೋಧನೆ), ಸ್ವಾತಂತ್ರ್ಯ ಹೋರಾಟ ಗಾರ ಟಿ.ಆರ್. ಶ್ಯಾಮಣ್ಣ (ಜೀವನಚರಿತ್ರೆ), ಕನ್ನಡ ಭಾಷಾಸಂಪದ, ತತ್ವಪದ ಸಾಹಿತ್ಯದಂತಹ ಕೃತಿಗಳನ್ನು ರಚಿಸಿ, ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಡಾ. ರಾಜಶ್ರೀ ಕಿಶೋರ ಅವರ ಬರಹಗಳಲ್ಲಿ ನಿಖರತೆ, ಸ್ಪಷ್ಟತೆ ಹಾಗೂ ಅಧ್ಯಯನಶೀಲತೆಯನ್ನು ಕಾಣಬಹುದಾಗಿದೆ. ಮೂರು 'ಕನಕದಾಸರ ಸಾಹಿತ್ಯದಲ್ಲಿ ವಿಜಯನಗರ ಸಾಮ್ರಾಜ್ಯ' ಅಂಶಗಳಿಂದಲೂ ಎಂబ ಕೃತಿ ಅಧ್ಯಯನಕಾರರ ಗೌರವಕ್ಕೆ ಪಾತ್ರವಾಗುತ್ತದೆಂಬ ಆಶಯವನ್ನು ವ್ಯಕ್ತಪಡಿಸಿ ಡಾ. ರಾಜಶ್ರೀ ಕಿಶೋರ ಅವರಿಗೆ ಶುಭಕೋರುತ್ತೇನೆ ಎಂದು ಡಾ. ಕೆ. ರವೀಂದ್ರನಾಥ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜಶ್ರೀ ಕಿಶೋರ

ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್‍ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್‌ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ  ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್‌.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...

READ MORE

Related Books