‘ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-2’ ಕೃತಿಯು ಕೆ. ಗೋಕುಲನಾಥ್ ಅವರ ಲೇಖನಗಳ ಸಂಕಲನವಾಗಿದೆ. ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಸಾಮಾಜಿಕ ಆಂದೋಲನದ ದೃಷ್ಟಿಯಿಂದ ಹರಿದಾಸರು ಮತ್ತು ಅವರ ಸಾಹಿತ್ಯ ಪ್ರಮುಖವಾಗುತ್ತದೆ, ಅದುವೇ ಅವರ ವೈಶಿಷ್ಟ್ಯ ಕೂಡ. ಅವರ ನೆಲೆ ಮೊದಲಿನವರಂತೆ ಸಾರಾಸಗಟಾಗಿ ವೈದಿಕ ವಿರೋಧಿ ನೆಲೆಯಾಗಿರಲಿಲ್ಲ. ಬಹುಸಂಖ್ಯಾತರು ನಂಬಿದ ಶ್ರದ್ಧೆ ಇಟ್ಟ ಧರ್ಮದೊಂದಿಗೆ ಸಾಗುತ್ತ ಅದರಲ್ಲಿ ಕಂಡುಬರುವ ಕುಂದುಕೊರತೆಗಳಷ್ಟು ನ್ಯೂನತೆಗಳನ್ನು ಶ್ರದ್ಧೆಗೆ ಪಟ್ಟು ಬೀಳದಂತೆ ಎತ್ತಿ ತೋರಿಸಿ, ಅವರ ಮನ ಒಪ್ಪುವಂತೆ ಮಾಡಿದರು ಎಂದು ಈ ಕೃತಿಯು ವಿಶ್ಲೇಷಿಸುತ್ತದೆ. ಈ ನಾಲ್ಕು ಸಂಪುಟಗಳಲ್ಲಿ ಜಾತಿ ಭೇದವಿಲ್ಲದ ಸಮಾಜದಲ್ಲಿಯ ಮೂಢನಂಬಿಕೆ, ತಪ್ಪು ಆಚರಣೆಗಳನ್ನು ತಿದ್ದಲು ಪ್ರಯತ್ನಿಸುವುದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರೇರೇಪಿಸುವ ನೀತಿ ಭೋದಕ ವಿಚಾರಗಳ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.
©2025 Book Brahma Private Limited.