‘ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-3’ ಕೃತಿಯು ಸ್ವಾಮಿ ರಾವ್ ಕುಲಕರ್ಣಿ ಅವರ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಬಹುತೇಕ ಸಾಹಿತ್ಯ, ಅರಮನೆ-ಗುರುಮನೆ ಮತ್ತು ಪಂಡಿತರ ಮನೆಮನೆಗಳಷ್ಟೇ ಸೀಮಿತವಾಗಿರುತ್ತದೆ. ಆದರೆ ಹರಿದಾಸ ಸಾಹಿತ್ಯವು ಈ ಮೂರೂ ಮನೆಗಳೊಂದಿಗೆ ಪಾಮರರ ಮನೆಯನ್ನೂ ಮುಟ್ಟಿತು. ಹರಿದಾಸ ಸಾಹಿತ್ಯವು ಎಲ್ಲ ಯುಗದಲ್ಲೂ ಸಲ್ಲುವಂಥದ್ದು. ದಲಿತವರ್ಗದಿಂದ ಹಿಡಿದು ಸಮಾಜದ ಅತ್ಯಂತ ಪ್ರಬಲ ವರ್ಗದವರೆಗೆ ಎಲ್ಲರಲ್ಲೂ ಹರಿದಾಸ ಸಾಹಿತ್ಯ ಸ್ವೀಕಾರವಾಗಿದೆ. ದ್ಯಾವವ್ವ, ದುರ್ಗವ್ವರ ಗುಡಿಗಳಲ್ಲಿ, ಎಲ್ಲ ವರ್ಗದ ಭಜನೆಗಳಲ್ಲಿ ಕೂಡ ದಸರ ಪದಗಳು ಅಂದಿನಿಂದಲೂ ಪ್ರವೇಶ ಪಡೆದಿದೆ ಎಂದು ವಿಶ್ಲೇಷಿಸಲಾಗಿದೆ. ದೇವರ ಆರಾಧನೆಗೆ ಜನಸಾಮಾನ್ಯರಿಗಿದ್ದ ಎಲ್ಲ ತೊಡಕುಗಳನ್ನು ನಿವಾರಣೆ ಮಾಡಿದ್ದು ದಾಸ ಸಾಹಿತ್ಯದ ಬಹುಮುಖ್ಯ ಲಕ್ಷಣವಾಗಿದೆ ಎಂದು ಈ ಕೃತಿಯು ಹೇಳುತ್ತದೆ.
©2025 Book Brahma Private Limited.