ಪುರಂದರದಾಸರು

Author : ಸಾ. ಕೃ. ರಾಮಚಂದ್ರರಾವ್

Pages 92

₹ 0.00




Year of Publication: 1964
Published by: ಶ್ರೀಪುರಂದರದಾಸರ ನಾಲ್ಕನೆಯ ಶತಮಾನೋತ್ಸವ ಸಮಿತಿ
Address: ಬೆಂಗಳೂರು-19

Synopsys

‘ಪುರಂದರದಾಸರು’ ದಾಸಶ್ರೇಷ್ಠ- ದಯಾನಿಧಿಗಳೆಂದು ಎಲ್ಲ ಹರಿದಾಸರಿಂದಲೂ ಸನ್ಮಾನಿತರಾದ ಪುರಂದರದಾಸರು ಕನ್ನಡನಾಡಿಗೆ ಗೌರವವನ್ನು ತಂದ ಮಹಿಮಾನ್ವಿತರಲ್ಲಿ ಹಿರಿಯ ಸಾಲಿಗೆ ಸೇರಿದವರು. ಪುರಂದರದಾಸರು ತೀರಿಕೊಂಡು 400 ವರ್ಷಗಳು ತುಂಬಿದ ಅವಧಿಯಲ್ಲಿ ಬೆಂಗಳೂರಿನ ಪುರಂದರದಾಸರ ಚತುರ್ಥ ಶತಮಾನೋತ್ಸವ ಸಮಿತಿಯು ಹಿರಿಯ ವಿದ್ವಾಂಸ ಎಸ್.ಕೆ. ರಾಮಚಂದ್ರರಾವ್ ಅವರು ರಚಿಸಿದ ಈ ಕೃತಿ ಪ್ರಕಟಿಸಿದೆ.

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books