ಸಾಹಿತಿಗಳಾದ ವಿ. ಸೀತಾರಾಮಯ್ಯ ಹಾಗೂ ಪ್ರೊ ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿದ `ದಾಸ ಸಾಹಿತ್ಯ' ಕೃತಿಯಲ್ಲಿ ದಾಸ ಸಾಹಿತ್ಯದ ಉಗಮದಿಂದ ಹಿಡಿದು ದಾಸ ಪರಂಪರೆಯ ಆಚರಣೆ-ಸಂಪ್ರದಾಯಗಳು-ಬರೆಹಗಳ ತನಕವೂ ವ್ಯಾಪಕ ಅಧ್ಯಯನದ ಮೂವರು ಲೇಖಕರ ಚಿಂತನಾ ರೂಪದ ಲೇಖನಗಳು ಇಲ್ಲಿವೆ.
ಸಾಹಿತ್ಯದಲ್ಲಿ ದಾಸ ಸಾಹಿತ್ಯದ ಸ್ಥಾನವೇನು?, ಕಾವ್ಯವೆನ್ನಬಹುದಾದ ದಾಸರ ಪದಗಳು ಸಂಖ್ಯೆಯಲ್ಲಿ ಎಷ್ಟಿವೆ?, ಸಾಮಾನ್ಯರ ಜನಜೀವನಕ್ಕೆ ದಾಸ ಸಾಹಿತ್ಯದ ಮಾರ್ಗದರ್ಶನವೇನು? ಯಾವ ಯಾವ ದಾಸರು ಎಷ್ಟೆಷ್ಟು ಪದ್ಯಗಳನ್ನು ರಚಿಸಿದ್ದಾರೆ ಈ ಎಲ್ಲದರ ಗಂಭೀರ ಚಿಂತನೆಯಾಗಿ ಕೃತಿ ಒಡಮೂಡಿದೆ.
ಪುರಂದರದಾಸರವರೆಗಿನ ಹರಿದಾಸ ಸಾಹಿತ್ಯ (ಎನ್. ಕೆ. ಕುಲ್ಕರ್ಣಿ), ವಿಜಯನಗರದ ಈಚಿನ ದಾಸ ಸಾಹಿತ್ಯ (ಎಸ್.ಕೆ. ರಾಮಚಂದ್ರರಾವ್), ದಾಸ ಸಾಹಿತ್ಯದ ಕೊಡುಗೆ (ಕೆ. ಸಂಪದ್ಗಿರಿರಾವ್) ಹಾಗೂ ಸಮೀಕ್ಷೆ (ವಿ. ಸೀತಾರಮಯ್ಯ) ಹೀಗೆ ನಾಲ್ಕು ಲೇಖನಗಳನ್ನು ಒಳಗೊಂಡಿದೆ.
©2024 Book Brahma Private Limited.