ಡಾ. ಜಿ. ವರದರಾಜ ರಾವ್ ಅವರ ಕೃತಿ-ಶ್ರೀಪಾದರಾಜರ ಕೃತಿಗಳು. ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯವೂ ಒಂದು ಪ್ರಮುಖ ಘಟ್ಟ. ಸುಮಾರು 200ಕ್ಕೂ ಅಧಿಕ ಹರಿದಾಸರು ತಮ್ಮದೇ ನೆಲೆಯಲ್ಲಿ ಸಾಮಾಜಿಕ ಜಾಗೃತಿಗೆ ಶ್ರಮಿಸಿದ್ದಾರೆ. ಮೊದಲಿನಿಂದಲೂ ದಾಸ ಸಾಹಿತ್ಯ ಪರಂಪರೆಯು ಮೌಖಿಕವಾಗಿದೆ. ಆದ್ದರಿಂದ, ಹರಿದಾಸರ ಸಾಹಿತ್ಯ-ಕೀರ್ತನೆ ಸಂಗ್ರಹ, ವಿಮರ್ಶೆ ಇತ್ಯಾದಿ ಕೆಲಸ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಮಾತ್ರವಲ್ಲ; ಇತರೆ ಧರ್ಮದ ಭಕ್ತಿ ಪಂಥದೊಂದಿಗೂ ತೌಲನಾತ್ಮಕ ಅಧ್ಯಯನವೂ ಆಗಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ಪಾದರಾಜರ ಕೃತಿಗಳ ಸಂಗ್ರಹಣೆಯಂತಹ ಕೆಲಸ ಮಹತ್ವದ್ದು ಹರಿದಾಸ ಸಾಹಿತ್ಯದ ಶಾಸ್ತ್ರೀಯ ಅಧ್ಯಯನದ ಯೋಜನೆಗೆ ಇಂತಹ ಕೃತಿಗಳು ಪೂರಕವಾಗಿ ಕೆಲಸ ಮಾಡುತ್ತವೆ. ಶ್ರೀಪಾದರಾಜರ ಕೀರ್ತನೆಗಳ ಈ ಆವೃತ್ತಿಯನ್ನು ತಾಳೆಗರಿ, ಕಾಗದದ ಪ್ರತಿ ಹಾಗೂ ಮುದ್ರಿತ ಪ್ರತಿಗಳಿಂದ ಕೂಡಿದ 112 ಆಕರಗಳ ಆಧಾರದಿಂದ ಈ ಕೃತಿ ಸಿದ್ಧಪಡಿಸಿದೆ.
©2024 Book Brahma Private Limited.