‘ಹರಿದಾಸರ ಸಮಾಜಮುಖಿ ಚಿಂತನೆಗಳು ಸಂಪುಟ-4’ ಕೃತಿಯು ಜಿ. ಅಶ್ವತ್ಥನಾರಾಯಣ ಅವರ ಲೇಖನಸಂಕಲವಾಗಿದೆ. ಈ ಕೃತಿಯಲ್ಲಿ ಕೆಲವು ದಾಸರ ತತ್ವಗಳು ವ್ಯಕ್ತವಾಗುತ್ತದೆ. ಸಂಸ್ಕೃದಿಂದಲೇ ಮುಕ್ತಿ ಶಾಸ್ತ್ರಪಾಂಡಿತ್ಯವಿಲ್ಲದವರು ಪಾಮರರು, ಪಾಪಿಗಳು ಎನ್ನುವ ಮನೋಧರ್ಮ ಪ್ರಚಲಿತದಲ್ಲಿದ್ದಾಗ ದಾಸರು ಕನ್ನಡದಲ್ಲಿ ವೇದಾಂತದ ಗಹನ ತತ್ವಗಳನ್ನು ಹೇಳಿದರು. ಕನ್ನಡದಲ್ಲಿಯೇ ಜನಸಾಮಾನ್ಯರು ಮುಕ್ತಿಗೆ ಪೂರ್ವಕವಾದ ಜ್ಞಾನವನ್ನುಪಡೆಯಲು ದಾರಿ ಮಾಡಿಕೊಟ್ಟರು. ದಾಸರ ಕೀರ್ತನೆಗಳಲ್ಲಿ ಬರದೇ ಇದ್ದ ವಿಚಾರಗಳೇ ಇಲ್ಲ. ಧರ್ಮ ನೀತಿ ಸಂಸಾರ, ವೇದಾಂತ ರಾಜಕಾರಣ, ಅರ್ಥನೀತಿ, ಸಾಮಾನ್ಯ ನೀತಿ, ವಿನೋದ ಎಲ್ಲವೂ ಇವೆ. ಮುಖ್ಯವಾಗಿ ಜೀವನಗಂಗೆಯ ಬೃಹಹದ್ದರ್ಶನವನ್ನು ಅವರು ತಮ್ಮ ಸಾಹಿತ್ಯದಲ್ಲಿ ಮಾಡಿಸಿದ್ದಾರೆ ಎಂದು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.