ಬೆಳ್ಳಕ್ಕಿ ಹಿಂಡು - ಸುಬ್ಬಣ್ಣ ರಂಗನಾಥ ಎಕ್ಕುಂಡಿ ಸಮಗ್ರ ಕಾವ್ಯ

Author : ಸು.ರಂ. ಎಕ್ಕುಂಡಿ

Pages 560

₹ 350.00




Published by: ಸಂಚಯ ಪ್ರಕಾಶನ
Address: ಬೆಂಗಳೂರು

Synopsys

‘ಬೆಳ್ಳಕ್ಕಿ ಹಿಂಡು’ ಕೃತಿಯು ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಸಮಗ್ರ ಕಾವ್ಯವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಭವಕೆ ಬರುವಾಗಲೇ ಭಗವಂತ ಇಟ್ಟಿರುವ ಮಣಿದೀಪವೊಂದೊಂದು ಹೃದಯದೊಳಗೆ ಕೊನೆಗೊಮ್ಮೆ ಕತ್ತಲು ಕವಿದಾಗ ಇರಲೆಂದು ಮುಕ್ತಿ ಲಿಪಿ ಓದಿಸಲು ನಿಮ್ಮ ಬಳಿಗೆ… ದೂರವಿದ್ದವರನ್ನು ಹತ್ತಿರಕೆ ತರಬೇಕು ಹರಿವ ಹೊಳೆಗೂ ಉಂಟು ಎರಡು ತೋಳು, ನೆಲವಪ್ಪಿದ ಎರಡು ದಂಡೆಗಳು ಬಾಂಧವ್ಯ ಬೆಸೆಯಬೇಕಲ್ಲವೆ?… ಎನ್ನುವ ಈ ಎರಡು ಬೇರೆ ಬೇರೆ ಪದ್ಯದ ಸಾಲುಗಳು ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ `ಬಕುಲದ ಹೂವುಗಳು‘ ಕವನ ಸಂಕಲನದಿಂದ ಉದ್ಧರಿಸಿದಂಥವು. ದೈವತ್ವ, ಮನುಷ್ಯ ಸಂಬಂಧ – ಎರಡರಲ್ಲೂ ಬಹಳವಾಗಿ ನಂಬಿಕೆಯಿದ್ದ ಎಕ್ಕುಂಡಿಯವರ ಮತ್ತೆರಡು ವಿಚಿತ್ರ ಆಸಕ್ತಿ ಎಂದರೆ ಮಧ್ವ ಸಿದ್ಧಾಂತ ಮತ್ತು ಮಾರ್ಕ್ಸ್ ವಾದ ಪತಿಪಾದನೆ. ಇಲ್ಲಿ ಮಧ್ವ ಸಿದ್ಧಾಂತ ಎನ್ನುವುದನ್ನು ಕೊಂಚ ವ್ಯಾಪಕವಾದ ಅರ್ಥದಲ್ಲಿ ನೋಡಿ: ಎಕ್ಕುಂಡಿಯವರಿಗೆ ಮಧ್ಯಕಾಲೀನ ಭಾಗವತ ಪರಂಪರೆಯಲ್ಲಿದ್ದ ವಿಶ್ವಾಸ ಮತ್ತು ಉದಾರ ನಿಲುವು ಇವು ಅಂತರ್ಗತವಾಗಿತ್ತು ಎಂದುಕೊಳ್ಳಬಹುದೇನೋ. ಅಂತೆಯೇ ಎಕ್ಕುಂಡಿ ಭಾಗವತ ಹಿನ್ನೆಲೆಯ ಅನೇಕ ಪೌರಾಣಿಕ ಸಂಗತಿಗಳನ್ನು ತೆಗೆದುಕೊಂಡು ಪದ್ಯ ರಚಿಸಿದ್ದಾರೆ. ಕಥನ ಕವನಗಳೂ ಇಲ್ಲಿವೆ.

About the Author

ಸು.ರಂ. ಎಕ್ಕುಂಡಿ
(20 January 1923 - 20 August 1995)

ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು.  ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ...

READ MORE

Related Books