ಇಗ್ ನೊಬೆಲ್ ಪ್ರಶಸ್ತಿ! ವಿಜ್ಞಾನ ಸಾಹಿತ್ಯದಲ್ಲಿ ಇಗ್ ನೊಬೆಲ್ ಸಂಶೋಧನೆಗಳು ಹೊಸ ಕ್ರಾಂತಿ ಸೃಷ್ಟಿಸಿ ಅವರ ಮೆಚ್ಚುಗೆ ಪಡೆದಿವೆ. ವಿಜ್ಞಾನ ಹಾಸ್ಯಮಯವಾಗಿಯೂ ಇರಬಲ್ಲವು ಎಂದು ಈ ಸಂಶೋಧನೆಗಳು ಮನವರಿಕೆ ಮಾಡಿಸುತ್ತವೆ. ಇಗ್ ನೊಬೆಲ್ ಆವಿಷ್ಕಾರಗಳು ‘ರಬ್ಬರ್ ಸ್ಟಾಂಪ್’ ರೀತಿಯ ಸಂಶೋಧನೆ ಗಳನ್ನು, ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ, ತಿಳಿಹಾಸ್ಯ ರೀತಿಯಲ್ಲಿ ಟೀಕಿಸುತ್ತವೆ. ದಿನನಿತ್ಯದ ಸಾಧಾರಣ ವಿಷಯಗಳಲ್ಲಿ ಅನೇಕ ಸಣ್ಣ ಪುಟ್ಟ ಆದರೆ ಪ್ರಭಾವ ಬೀರಬಲ್ಲ ಸಂಶೋಧನಾ ಅಂಶಗಳು ಹುದುಗಿರುತ್ತವೆ ಎಂಬ ಸತ್ಯವನ್ನು ವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಮನದಟ್ಟು ಮಾಡಿಸತ್ತವೆ ಇಗ್ ನೊಬೆಲ್ ಪಶಸ್ತಿಗಳು. ಇವು ಇನ್ನೂ ಗಂಭೀರ ವೈಜ್ಞಾನಿಕ ಆವಿಷ್ಕಾರಗಳಿಗೆ ನಾಂದಿಯಾಗಬಲ್ಲ ಸಾಧ್ಯತೆಗಳಿವೆ. ಜೀವನಪರ್ಯಂತ ಸಂಶಯಾತ್ಮಕವಾಗಿ ಚಿಂತಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ, ಅವರಲ್ಲಿ ಅಸಾಂಪ್ರದಾಯಿಕ ಕಲ್ಪನೆಗಳನ್ನು ಹುಟ್ಟುಹಾಕಲು ಅನುವು ಮಾಡಿಕೊಡು ತ್ತವೆ ಇಗ್ ನೊಬೆಲ್ ಸಂಶೋಧನೆಗಳು. ವಿಜ್ಞಾನದಲ್ಲಿ ವೈಜ್ಞಾನಿಕತೆಯನ್ನು ಅರಸುವಂತೆ ಪ್ರೇರೇಪಿಸುತ್ತವೆ ಇಗ್ ನೊಬೆಲ್ ಸಂಶೋಧನೆಗಳು. ಈ ಸಂಶೋಧನೆಗಳನ್ನು ಓದಿದ ಕೂಡಲೆ, ಅಯ್ಯೊ, ಇದೆಂತಹ ಅವಿವೇಕದ ವಿಷಯ ಎಂದು ತಾತ್ಸಾರದ ಕೆಟ್ಟ ನಗು ಬರುವುದು ಸಹಜ. ಆದರೆ, ಬಳಿಕ ಆ ವಿಷಯದ ಬಗ್ಗೆ ನಮ್ಮನ್ನು ಚಿಂತಿಸಲು ಪ್ರಚೋದಿಸುತ್ತವೆ.
©2024 Book Brahma Private Limited.