ಪ್ರಕೃತಿಯಲ್ಲಿನ ಜೀವ ವೈವಿಧ್ಯ ಎಷ್ಟೊಂದು ಸ್ವಾರಸ್ಯಕರ ಮತ್ತು ಕೌತುಕಮಯ! ಗೂಡು ಕಟ್ಟುವ ಹಕ್ಕಿಯಾಗಲೀ, ಕಾಡಿನ ಪ್ರಾಣ - ಸಾಕುಪ್ರಾಣ ಯಾಗಲೀ, ಭೂಮಿಯಲ್ಲಿ ಬಿಲ ತೋಡಿ ಬದುಕುವ ಜೀವಿಯಾಗಲಿ - ನಾವು `ಭಲೇ ನಿನ್ನ ಚಾಣಾಕ್ಷತನವೇ’ ಎನ್ನುವಂತೆ ತನ್ನತನವನ್ನು ಮೆರೆದು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತವೆ. ಎಲ್ಲ ಜೀವಿಗಳೂ ಬದುಕಲು ಹೋರಾಡುತ್ತವೆ. ತಮ್ಮ ತಮ್ಮ ಆಹಾರ ಸಂಗ್ರಹಣೆಯಲ್ಲಿ ಅವು ತೋರುವ ಚಾಕಚಕ್ಯತೆ ಬೆರಗು ಮೂಡಿಸುವಂಥದು. ತಮ್ಮ ವಾಸಸ್ಥಳವನ್ನು ನಿರ್ಮಿಸಿಕೊಳ್ಳುವ ಕುಶಲತೆ ಅತ್ಯಂತ ನವಿರಾದುದು. ಸೃಷ್ಟಿಯಲ್ಲಿ ಸಹಬಾಳವೆಯ ತತ್ವವನ್ನು ಅನುಸರಿಸಿ ಎಲ್ಲ ಜೀವಿಗಳೂ ಬದುಕುತ್ತವೆ. ಮನುಷ್ಯ ಪ್ರಾಣ ಮಾತ್ರ ಇದಕ್ಕೆ ಅಪವಾದವೆಂದರೆ ತಪ್ಪಾಗದು. ಅವನಿಂದಾಗಿ ಇಂದು ನಾವು ಅನೇಕ ಜೀವಿಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ಕಾಣುವಂತಾದದ್ದು ದುರಂತವೇ. ಪ್ರಾಣ -ಪಕ್ಷಿಗಳಲ್ಲದೆ ಇನ್ನಿತರ ಜೀವಿಗಳ ನಡವಳಿಕೆ ಮತ್ತು ವಿಶೇಷತೆಯನ್ನು ಇನ್ನೊಂದು ಕೌತುಕದ ಜೊತೆ ಹೋಲಿಸಿ ಸ್ವಾರಸ್ಯಿಕರವಾಗಿ ಈ ಕೃತಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.