‘ಪೆಡಂಭೂತಗಳು ಅಳಿದವೇಕೆ?’ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ. ಸ್ಟೀವನ್ ಸ್ಟಿಲ್‍ಬರ್ಗ್‍ನ `ಜುರಾಸಿಕ್ ಪಾರ್ಕ್’ ಸಿನಿಮಾ ನೋಡಿದ್ದರೆ ನೀವೂ ಎಂದು ಮರೆಯಲಾರಿರಿ. ಭಯಂಕರ ಡೈನೋಸಾರ್ಗಳ ಬಗ್ಗೆ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೀರಿ. ಅದರಲ್ಲಿ ಸೃಷ್ಟಿಸಿದ ಟೈರನೋಸಾರಸ್ ರೆಕ್ಸ್ ಎಂಬ ಡೈನೋಸಾರ್ ಎದೆಯನ್ನು ಡವಗುಟ್ಟಿಸುತ್ತದೆ. ಡೈನೋಸಾರ್ ಗಳು ಭೂಮಿಯ ಮೇಲೆ ಆಳಿದ್ದು ನಿಜ. ಅದು ಭೂಚರಿತ್ರೆಯಲ್ಲಿ ಆರೂವರೆ ಕೋಟಿ ವರ್ಷದ ಹಿಂದಿನ ಕಥೆ. ಆಗ ಜಗತ್ತಿನ ಬಹು ಭಾಗವನ್ನು ಡೈನೋಸಾರ್ಗಳೇ ಆಳುತ್ತಿದ್ದವು. ಈಗಲೂ ಅಮೆರಿಕದ ಮಾಂಟಾನ, ಇತ್ತ ಗೋಬಿ ಮರುಭೂಮಿ, ಅಷ್ಟೇ ಏಕೆ ನಮ್ಮ ಭಾರತದ ಗುಜರಾತ್, ಮಧ್ಯಪ್ರದೇಶ ಮತ್ತು ಆಂಧ್ರದ ಗೋದಾವರಿ ಕಣಿವೆಯಲ್ಲಿ ಅವುಗಳ ಪಳೆಯುಳಿಕೆಗಳು ಸಿಕ್ಕುತ್ತಲೇ ಇವೆ. ಆನೆಗಿಂತ ಐದು-ಹತ್ತು ಪಟ್ಟು ಹೆಚ್ಚು ತೂಕದ ಡೈನೋಸಾರ್ಗಳು ಇದ್ದವು. ದೀರ್ಘಕಾಲ ಭೂಮಿಯಲ್ಲಿ ವಿಕಾಸವಾದ ಡೈನೋಸಾರ್ ಗಳು ಹಠಾತ್ತೆಂದು ಏಕೆ ಮರೆಯಾದವು? ತಜ್ಞರ ಪ್ರಕಾರ ಬಹು ದೊಡ್ಡ ಉಲ್ಕೆಯೊಂದು ಮೆಕ್ಸಿಕೋ ಬಳಿ ಬಡಿದು ಅದರಿಂದೆದ್ದ ಧೂಳು ಇಡೀ ಜಗತ್ತನ್ನೇ ಆವರಿಸಿತು. ಸಸ್ಯಗಳು ಮರೆಯಾದವು, ಇದರ ಹಿಂದೆಯೇ ಸಸ್ಯಾಹಾರಿ, ಮಾಂಸಹಾರಿ ಡೈನೋಸಾರ್ಗಳು ಕಣ್ಮರೆಯಾದವು. `ಪೆಡಂಭೂತಗಳು ಅಳಿದವೇಕೆ’ ಕೃತಿಯಲ್ಲಿ ಯಾವ ಯಾವ ಕಾಲಘಟ್ಟದಲ್ಲಿ ಯಾವ ಯಾವ ಬಗೆಯ ಡೈನೋಸಾರ್ ಗಳು ಭೂಮಿಯ ಮೇಲೆ ಅಡ್ಡಾಡಿದವು, ಅವುಗಳ ರಚನೆ ಹೇಗಿದ್ದವು? ಎಂಬುದನ್ನು ಚಿತ್ರಗಳ ಸಹಿತ ವಿವರಿಸಿದೆ.
©2025 Book Brahma Private Limited.