‘ದೈತ್ಯಪ್ರತಿಭೆಗಳ ಹೆಗಲ ಮೇಲೆ’ ಕೃತಿ ಅಗೋಚರ ಸೂಕ್ಷ್ಮಜೀವಿ ಲೋಕದ ಅಸಾಮಾನ್ಯ ವಿವರಗಳನ್ನು ಬಿಚ್ಚುತ್ತ ಹೋಗುತ್ತದೆ. ಈ ಕ್ಷೇತ್ರದಲ್ಲಿ ನಾಲ್ಕು ಶತಮಾನಗಳ ಕಾಲ ನಡೆಸಿದ ವೈಜ್ಞಾನಿಕ ಶೋಧದ ಕಥೆಯನ್ನು ನವಿರಾಗಿ ತೆರೆಯುತ್ತದೆ. ಲ್ಯೂವೆನ್ ಹೋಕ್, ಲೂಯಿ ಪಾಶ್ಚರ್, ರಾಬರ್ಟ್ ಕಾಕ್- ಇವರು ತಮ್ಮ ಬದುಕನ್ನೇ ಅಪಾಯಕ್ಕೊಡ್ಡಿಕೊಂಡು ಸೂಕ್ಷ್ಮಜೀವಿಗಳ ಪ್ರಪಂಚವನ್ನು ಜಗತ್ತಿಗೆ ಅನಾವರಣ ಮಾಡಿದರು. ಮನುಕುಲವನ್ನಷ್ಟೇ ಅಲ್ಲ ಇಡೀ ಜೀವಿ ಸಂಕುಲವನ್ನು ಉಳಿಸಲು ಅನೇಕ ಸಾಧಕರು ಹೋರಾಡಿದರು. ಅಗೋಚರ ಶತ್ರುಗಳನ್ನು ಪತ್ತೆಹಚ್ಚಿದರು. ಅವುಗಳನ್ನು ತಮ್ಮ ಅಡಗುತಾಣಗಳಿಂದ ಹೊರಗೆಳೆದರು. ಅವುಗಳ ಬೆನ್ನು ಹತ್ತಿದರು. ಲಸಿಕೆಗಳನ್ನು ಸೃಷ್ಟಿಸಲು ಹೋರಾಡಿ ಗೆದ್ದರು. ಹಾಗಿರದಿದ್ದರೆ ಕಾಲರಾ ರೋಗ ಒಂದೇ ಸಾಕು, ಇಡೀ ಜೀವಿಸಂಕುಲವನ್ನು ಒಂದೇ ಅಲೆಯಲ್ಲಿ ಮುಗಿಸುತ್ತಿತ್ತು. ಈ ಪುಸ್ರಕದಲ್ಲಿ ತಾಂತ್ರಿಕ ಶಬ್ದಗಳ ಗೊಂದಲವಿಲ್ಲ. ಸುಲಭ ಶೈಲಿ. ಆತ್ಮೀಯ ನಿರೂಪಣೆ ಕೃತಿಯುದ್ದಕ್ಕೂ ಓದುಗರನ್ನು ಸೆರೆ ಹಿಡಿಯುತ್ತದೆ. ಮನುಕುಲ ಉಳಿಸಿದ ಈ ದೈತ್ಯಪ್ರತಿಭೆಗಳ ಸಾಹಸಗಾಥೆಗೆ ಈ ಪುಸ್ತಕ ಪ್ರವೇಶವನ್ನು ಒದಗಿಸುತ್ತದೆ.
©2024 Book Brahma Private Limited.