ಕೆ.ಪುಟ್ಟಸ್ವಾಮಿ ಹಾಗೂ ಕೃಪಾಕರ ಸೇನಾನಿ ಅವರು ಜಂಟಿಯಾಗಿ ಬರೆದ ಕೃತಿ-ಜೀವ ಜಾಲ. ಜೀವ ವಿಜ್ಞಾನವನ್ನು ಅರ್ಥೈಸಿಕೊಳ್ಳಬೇಕಾದರೆ ಪರಿಸರ ಜ್ಞಾನ ತುಂಬಾ ಮುಖ್ಯ. ಜೀವಿಗಳು, ಅವುಗಳಲ್ಲಿಯ ವೈವಿಧ್ಯತೆ, ಸ್ವರೂಪ-ಸ್ವಭಾವಗಳು ಇವೆಲ್ಲವೂ ಜೀವಜಾಲದ ಒಟ್ಟು ಸ್ವರೂಪ ತಿಳಿಯಲು ನೆರವಾಗುತ್ತವೆ. ಈ ವಿಚಾರದ ಸಮರ್ಥನೆಗಾಗಿ ಲೇಖಕರು ಡಾರ್ವಿನ್ನನ ವಿಕಾಸವಾದದ ಚಿಂತನೆಗಳನ್ನು ಬಳಸಿಕೊಂಡಿದ್ದಾರೆ. ಜೀವಜಾಲ ಆಧರಿಸಿರುವ ಪ್ರತಿಯೊಂದು ಸೂತ್ರವನ್ನು ವೈಜ್ಞಾನಿಕ ಪರಿಭಾಷೆಯ ಕಸರತ್ತಿಲ್ಲದೆ, ಕುತೂಹಲಕಾರಿ ದೃಷ್ಟಾಂತಗಳಿಂದ ನಿರೂಪಿಸಿರುವ ಪರಿ ಕನ್ನಡ ವಿಜ್ಞಾನ ಬರವಣಿಗೆಯಲ್ಲಿಯೇ ವಿಶಿಷ್ಟವಾದುದು. ಹೂರಣ(ವಸ್ತು) ಕುರಿತಂತೆ ‘ಜೀವಜಾಲ’ವೊಂದು ಪರಿಣಾಮಕಾರಿ ಕೃತಿ. ಅಧ್ಯಯನ, ಅನುಭವ, ಆಸಕ್ತಿ ಮತ್ತು ಅಭಿವ್ಯಕ್ತಿ ಅನಿವಾರ್ಯತೆಗಳ ಮಧುರ ಬಂಧ. ಇಲ್ಲಿಯ ಅಧ್ಯಾಯಗಳು ಸೃಜನಶೀಲ ಕಾದಂಬರಿಯ ತೆರದಲ್ಲಿ ಕ್ರಮಶಃ ಅನಾವರಣಗೊಂಡು ಓದುಗನನ್ನು ಅಂತರ್ಮುಖಿಯಾಗಿಸುತ್ತದೆ. ಜೀವ ಜಾಲದ ವಿಷಯಗಳು ಈ ಜಗತ್ತಿನ ವಿಸ್ಮಯಗಳನ್ನು ಬಹಿರಂಗಪಡಿಸುತ್ತವೆ.
©2024 Book Brahma Private Limited.