ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸಿದ ಜೀವಿವಿಕಾಸ ಸಿದ್ಧಾಂತಕ್ಕೆ ಪ್ರೇರಣೆ ಒದಗಿಸಿದ್ದು ದಕ್ಷಿಣ ಅಮೆರಿಕ ಖಂಡದ ಈಕ್ವೇಡಾರ್‍ಗೆ ಸೇರಿದ ಗಲಪಗಾಸ್ ದ್ವೀಪ. ಇಲ್ಲಿನ ಜೀವಿ ವೈವಿಧ್ಯವನ್ನು ದಾಖಲೆ ಮಾಡುತ್ತ ಡಾರ್ವಿನ್ ಬೆರಗಾಗಿದ್ದೂ ಉಂಟು. ಈ ದ್ವೀಪಕ್ಕೆ ಹೋಗಿ ಅಧ್ಯಯನ ಮಾಡಲು ಡಾರ್ವಿನ್ ನಡೆಸಿದ ತಯಾರಿಯೇ ಒಂದು ರೋಚಕ ಕಥೆ.
ಡಾರ್ವಿನ್ ನೋಡಿದ ದ್ವೀಪ ಈಗ ತನ್ನ ಮೂಲ ಸೊಗಡನ್ನು ಕಳೆದುಕೊಂಡಿದೆ. ವಾಣಿಜ್ಯೀಕರಣದಿಂದಾಗಿ ಅಲ್ಲಿ ಹಡಗುಗಳು ಸಾಗುತ್ತವೆ, ಕೆಲವು ಅಪಘಾತಕ್ಕೀಡಾಗಿ ಇಡೀ ಜೀವಿ ಸಂಕುಲದ ಬದುಕಿಗೇ ಮುಳುವಾಗಿವೆ. ಗಲಪಗಾಸ್‍ನಲ್ಲಿ ಡಾರ್ವಿನ್ ಅಧ್ಯಯನಶೀಲನಾಗಿದ್ದು ಐದು ವಾರಗಳು ಮಾತ್ರ. ಅಲ್ಲಿ 25 ಬಗೆಯ ಪಕ್ಷಿಗಳ ಮಾದರಿಗಳನ್ನು ಸಂಗ್ರಹಿಸಿದ್ದ. ಪ್ರಾಣ ಪ್ರಪಂಚಕ್ಕೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಅಲ್ಲಿನ ಭೂವಿಜ್ಞಾನಕ್ಕೂ ಕೊಟ್ಟಿದ್ದ. ಈ ಕೃತಿಯಲ್ಲಿ ಡಾರ್ವಿನ್ ನ ವಿಕಾಸ ಸಿದ್ಧಾಂತ ರೂಪುಗೊಳ್ಳಲು ಈ ದ್ವೀಪ ಎಷ್ಟು ಬಗೆಯ ಪ್ರಾಣಿ- ಪಕ್ಷಿಗಳ ಅಧ್ಯಯನ ಮಾಡಬೇಕಾಯಿತು, ಈಗಿನ ಅವುಗಳ ಸ್ಥಿತಿಗತಿ ಏನು ಎಂಬುದರ ಬಗ್ಗೆ ವೈಜ್ಞಾನಿಕ ನೋಟವಿದೆ.
©2024 Book Brahma Private Limited.