ಅಧಿಕಾರಿಯಾಗಿ ಕಾಡಿನ ಮೇಲೆ ಹಕ್ಕು ಸಾಧಿಸುವುದಕ್ಕೂ, ಸಂವೇದನಾಶೀಲ ಮನುಷ್ಯನಾಗಿ ಕಾಡನ್ನು ಆಸ್ವಾದಿಸುವುದಕ್ಕೂ ವ್ಯತ್ಯಾಸವಿದೆ. ಅಧಿಕಾರಿಯೊಬ್ಬ ಸಂವೇದನಾಶೀಲ ಮನುಷ್ಯನೂ ಆದರೆ ಅದರಿಂದ ಕಾಡಿಗೂ, ಸಮಾಜಕ್ಕೂ ಸಾಕಷ್ಟು ಲಾಭಗಳಿವೆ. ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಡಾ. ಸಿ. ಎಚ್. ಬಸಪ್ಪನವರು ಸೃಜನಶೀಲ ಮನಸ್ಸಿನಿಂದ ಕಾಡನ್ನು ನೋಡಿ, ಅನುಭವಿಸಿ ಅದನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಇಲ್ಲಿ ಕ್ಯಾಮರಾ ಕಣ್ಣು ಮತ್ತು ಸೃಜನಶೀಲ ಮನುಷ್ಯನ ಒಳಗಣ್ಣು ಜೊತೆ ಜೊತೆಯಾಗಿ ಕೆಲಸ ಮಾಡಿದೆ. ಹೆಸರೇ ಸೂಚಿಸುವಂತೆ ಈ ಕೃತಿಯಲ್ಲಿ ವರ್ಣಮಯ ಚಿತ್ರಗಳಿವೆ. ಅದರ ಜೊತೆಗೆ ಅವರ ಕಾಡಿನ ನಡುವೆ ಕಳೆದ ಅನುಭವಗಳ ಚಿತ್ರಣವೂ ಇದೆ. ಚಿತ್ರ ಮತ್ತು ಚಿತ್ರಣಗಳ ಜುಗಲ್ ಬಂದಿ ಈ ಪುಸ್ತಕ.
©2024 Book Brahma Private Limited.