ಜೀವ ಜಗತ್ತಿನ ಕೌತುಕಗಳು- ಪ್ರೀತಿ ಪ್ರಣಯ

Author : ಎನ್.ಎಸ್. ಲೀಲಾ

Pages 88

₹ 80.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080-22203580/0

Synopsys

‘ಜೀವ ಜಗತ್ತಿನ ಕೌತುಕಗಳು- ಪ್ರೀತಿ ಪ್ರಣಯ’ ಲೇಖಕಿ ಲೀಲಾ ಎನ್.ಎಸ್ ಅವರ ಜೀವ ಜಗತ್ತಿನ ಕೌತುಕಗಳು ಸರಣಿಯ ಕೃತಿ. ಪ್ರಾಣಿಶಾಸ್ತ್ರಜ್ಞೆಯಾಗಿರುವ ಲೀಲಾ ಅವರು ಜೀವ ಜಗತ್ತಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಮನುಷ್ಯ ಮಾತ್ರವಲ್ಲದೇ ಜೀವಸಂಕುಲದಲ್ಲಿಯ ಇತರೆ ಪ್ರಾಣಿ - ಪಕ್ಷಿಗಳು ಪ್ರೀತಿ ಪ್ರಣಯದ ಭಾವುಕತೆಯಲ್ಲಿ ಮುಳುಗುತ್ತವೆ ಎಂಬುದನ್ನು ಸಂಶೋಧನಾತ್ಮಕವಾಗಿ ಕಂಡು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಜೀವ ಜಗತ್ತಿನ ಅತೀ ಸೂಕ್ಷ್ಮ ಸಂಗತಿಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಎನ್.ಎಸ್. ಲೀಲಾ
(10 December 1944)

ಎನ್.ಎಸ್. ಲೀಲಾ ಅವರು ಎಂ.ಎಸ್ಸಿ., ಪಿಎಚ್.ಡಿ ಪದವೀಧರರು.  ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ತುಮಕೂರು ಜಿಲ್ಲೆಯ( ಜನನ 10-12-1944 ) ಮಧುಗಿರಿಯವರು. ತಂದೆ -ಎನ್.ಎಸ್. ಕೌಶಿಕ್, ತಾಯಿ- ಅಹಲ್ಯಾಬಾಯಿ ಕೃತಿಗಳು: ಇನ್ಸುಲಿನ್‌ನ ಆತ್ಮಕತೆ, ಜೀವ ಜಗತ್ತಿನ ಕೌತುಕಗಳ ಮಾಲೆ, ಚಲನೆ, ಲಾಲನೆ-ಪಾಲನೆ, ಪ್ರೀತಿ-ಪ್ರಣಯ, ಹುಟ್ಟು-ಸಾವು, ನಿದ್ದೆ-ವಿಶ್ರಾಂತಿ, ಜೈವಿಕ ತಂತ್ರಜ್ಞಾನ, ನೀರು, ಪ್ರಕೃತಿ-ವಿಕೃತಿ, ಜೆ.ಬಿ.ಎಸ್. ಹಾಲೇನ್, ಊತಕ ಕೃಷಿ, ನಮ್ಮೊಳಗಿನ ಖ್ಯಾತನಾಮರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸದೋದಿತ ಪ್ರಶಸ್ತಿ, ವರ್ಷದ ಅಂತಾರಾಷ್ಟ್ರೀಯ ಮಹಿಳೆ-2001, ಬಿ.ಎ.ಆರ್‌.ಸಿ. ಪ್ರಶಸ್ತಿ, ಅತ್ಯುತ್ಯಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳು ಲಭಿಸಿದೆ. ...

READ MORE

Related Books