ಲೇಖಕ ಡಾ. ಎ.ಓ. ಆವಲಮೂರ್ತಿ ಅವರು ಬರೆದ ವಿಜ್ಞಾನ ಸಂವಾದ ಕೃತಿ ʻಲಸಿಕೆಗಳ ತಯಾರಿಕೆ ಹೇಗೆ?ʼ. ಇದು ʼಪುಟ್ಟ- ಕಿಟ್ಟಿ ವಿಜ್ಞಾನ ಸಂವಾದʼದ 19ನೇ ಪುಸ್ತಕವಾಗಿದೆ. ಮಕ್ಕಳಲ್ಲಿ ವಿಜ್ಞಾನದ ಕುರಿತ ಸಾಮಾನ್ಯ ಅರಿವು ಮೂಡಿಸಿ ಅವರನ್ನು ಇನ್ನಷ್ಟು ಚಿಂತನಶೀಲರನ್ನಾಗಿ ಮಾಡುವ ಕಥೆಗಳು ಪುಸ್ತಕದಲ್ಲಿವೆ. ಸೂರ್ಯನೆದುರು ಕಣ್ಣುಮುಚ್ಚಾಲೆ, ಸುನಾಮಿ ಉಂಟಾಗುವುದು ಹೇಗೆ?, ದ್ಯುತಿ ಸೂಕ್ಷ್ಮದರ್ಶಕ ಕೆಲಸ ಮಾಡುವುದು ಹೇಗೆ?, ಲಸಿಕೆಗಳ ತಯಾರಿಕೆ ಹೇಗೆ?, ಸೌರ ಮಂಡಲ ಹುಟ್ಟಿದ್ದು ಹೇಗೆ?, ಹುಟ್ಟುವ ಮಗು ಗಂಡೋ? ಹೆಣ್ಣೆ?, ವಿದ್ಯುತ್ ಮೀಟರ್ ಕೆಲಸ ಮಾಡುವುದು ಹೇಗೆ ? (ಗ್ಯಾಲ್ವನೋಮೀಟರ್), ಜಿರಳೆಯ ಜೀವನ ಚಕ್ರ, ನೀಲಗಿರಿ ಅಂತರ್ಜಲವನ್ನು ನುಂಗುವ ಮಾರಿಯೇ?, ಲೇಸರ್ ಬೆಳಕಿನ ಗಮ್ಮತ್ತೇನು?, ಜೀವಂತ ಮರದ ವಯಸ್ಸನ್ನು ಕಂಡುಹಿಡಿಯುವುದು ಹೇಗೆ? ಹಾಗೂ ಹಿಮ ಕರಡಿಯ ಬಣ್ಣವೇಕೆ ಬಿಳುಪು? ಸೇರಿ ಒಟ್ಟು 12 ಲೇಖನಗಳಿವೆ.
©2025 Book Brahma Private Limited.