ಜೀವ ಸಂಕುಲಗಳ ವಿಕಾಸವನ್ನು ಅಧ್ಯಯನ ಮಾಡಿದ ಚಾರ್ಲ್ಸ್ ಡಾರ್ವಿನ್ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿ-ಜೀವ ಸಂಕುಲಗಳ ಉಗಮ. ಮಂಗನಿಂದ ಮಾನವನಾದ ಎಂಬ ಪರಿಕಲ್ಪನೆ ನೀಡಿದ್ದೇ ಚಾರ್ಲ್ಸ್ ಡಾರ್ವಿನ್. ಈತನ ವಿಕಾಸವಾದವನ್ನು ಆಧುನಿಕ ಜೀವವಿಜ್ಞಾನದ ಬುನಾದಿ ಎಂದೇ ಹೇಳಲಾಗುತ್ತದೆ. ಈ ಕೃತಿಯು ಪ್ರಪಂಚದಲ್ಲಿ ಜೀವ ಸೃಷ್ಟಿಯ ಕುರಿತು ಬೈಬಲ್ ಸೇರಿದಂತೆ ಇತರೆ ಧರ್ಮಗ್ರಂಥಗಳು ಪ್ರತಿಪಾದಿಸಿದ ನಂಬಿಗೆಗಳ ಬೇರನ್ನೇ ಅಲ್ಲಾಡಿಸಿತು.ಈ ವಾದಕ್ಕೆ ಸಮರ್ಥನೆಗಳಾಗಿ ಚಾರ್ಲ್ಸ್ ಡಾರ್ವಿನ್ ನೀಡಿರುವ ಅಧ್ಯಯನದ ಆಕರಗಳು, ಜೀವ ಸಂಕುಲ ಹುಟ್ಟು, ಬೆಳವಣಿಗೆಯ ರೀತಿಗಳು ಜಗತ್ತಿನ ಗಮನ ಸೆಳೆದವು. ಭೂಮಿಯ ಮೇಲೆ ಜೀವ ಉತ್ಪತ್ತಿಯಾಗಿ ನಂತರ ಅಳಿದು ಹೋಗಿ ತದನಂತರ ಅವು ಪಡೆದುಕೊಳ್ಳುವ ರೂಪುಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು ಈ ವಾದದ ಹೆಚ್ಚುಗಾರಿಕೆ. ಈ ಕುರಿತು ವಿವರ ಮಾಹಿತಿ ಒಳಗೊಂಡ ಕೃತಿ ಇದು.
©2025 Book Brahma Private Limited.