ಈ ಕೃತಿಯಲ್ಲಿ ೧೦೧ಕ್ಕೂ ಹೆಚ್ಚು ಸೋಜಿಗಗಳಿವೆ. ಓದಿದ ತಕ್ಷಣ ಹೌದಲ್ಲವೇ? ಎಂಬ ಜಿಜ್ಞಾಸೆಗೆ ಒಳಗಾಗುವ ತರ್ಕಗಳಿವೆ. ಪ್ರಕೃತಿಯ ನಿಗೂಢಗಳಿವೆ. ಈ ಭೂಮಂಡಲದ ನೆಲ, ಜಲ, ವಾಯು ಅಲ್ಲದೇ ಭೂಮಂಡಲದ ಆಚೆಯೂ ಲೇಖಕರು ಓದುಗರನ್ನು ಕರೆದುಕೊಂಡು ಸಾಗಿ ಬೆರಗುಗೊಳಿಸುತ್ತಾರೆ. ಪುಸ್ತಕದ ಅಂತರಂಗದಲ್ಲಿ ಪ್ರಾಣಿಗಳ ಆಟೋಟ, ಹೊಂದಾಣಿಕೆ, ರಕ್ಷಣೆ, ಬೇಟೆ, ಹವ್ಯಾಸ ಮುಂತಾದ ಪ್ರಾಣಿ, ಪಕ್ಷಿ, ಮನುಷ್ಯನ ಹೊರನೋಟವನ್ನು ಮನೋಜ್ಞವಾಗಿ, ವೈಜ್ಞಾನಿಕ ದೃಷ್ಟಿಕೋನದಿಂದ ಬಿಚ್ಚಿಟ್ಟಿರುವ ಡಾ.ಲಿಂಗರಾಜ ರಾಮಾಪೂರರವರ ಪ್ರಯತ್ನ ತೃಪ್ತಿಕರವಾದದು. ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ, ಓದುಗರಲ್ಲಿ, ವೈಜ್ಞಾನಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸುವ ಅವಶ್ಯಕತೆಯ ಇಂದಿನ ದಿನಮಾನದಲ್ಲಿ ‘ಸೋಜಿಗ ಈ ಜಗ’ ಇಂತಹ ಪುಸ್ತಕಗಳ ಅಗತ್ಯತೆ ಸಾಕಷ್ಟಿದೆ. ಜಗತ್ತಿನ ವಿಸ್ಮಯ ಪರಮಾದ್ಭುತ. ಹಲವು ವೈವಿಧ್ಯ ವಿಚಿತ್ರಗಳ ತಾಣ. ವೈಜ್ಞಾನಿಕ ದೃಷ್ಟಿಯಿಂದ ಜಗದ ಸತ್ಯಾಸತ್ಯತೆಯನ್ನು ತಿಳಿಯಬೇಕಾದರೆ, ಮನುಷ್ಯರಾದ ನಾವು ಹೊರಗಣ್ಣನ್ನು ತೆರೆದ ಜಗತ್ತನ್ನು ಅದರ ಸೌಂದರ್ಯವನ್ನು, ಜೀವಜಾಲಗಳ ವರ್ತನೆ, ಮನೋಭಾವ, ವ್ಯಕ್ತಿತ್ವ ಹಾಗೂ ಜೀವಿಸಲು ನಡೆಸುವ ಹೋರಾಟಗಳನ್ನು ಸೂಕ್ಷ್ಮವಾಗಿ ತಿಳಿಯಬೇಕಾಗಿದೆ. ಅಂತಹ ಪ್ರಯತ್ನದ ಭಾಗವೇ ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರವರ ‘ಸೋಜಿಗ ಈ ಜಗ’.
©2024 Book Brahma Private Limited.