ಪ್ರಾಣಿ ಪ್ರಪಂಚದ ವಿಸ್ಮಯಗಳು-ಈ ಕೃತಿಯನ್ನು ಡಾ. ಶಿವರಾಮ ಕಾರಂತ ಅವರು ರಚಿಸಿದ್ದಾರೆ. ಜಗತ್ತಿನ ಚರಾಚರವಸ್ತುಗಳ ಕಡೆಗೆ ಮಕ್ಕಳಿಗೆ ವಿಶೇಷ ಆಸಕ್ತಿ. ಜೀವ ಜಗತ್ತಿನೆಡೆಗೆ ಕೂತೂಹಲವನ್ನು ಹೆಚ್ಚಿಸುವ ಅಂಶಗಳು, ಪ್ರಾಣಿ ಪ್ರಪಂಚದ ಹಲವು ವಿಸ್ಮಯಕರ ವಿಚಾರಗಳನ್ನು ಈ ಪುಸ್ತಕ ಒಳಗೊಂಡಿದೆ. ಪ್ರಾಣಿ, ಪಕ್ಷಿಗಳ ವಾಸ, ವಲಸೆ, ಸಂಘಟನೆ, ಸಂಸಾರಿಕ ಜೀವನದಿಂದ ಹುಟ್ಟು ಸಾವಿನವರೆಗೂ ಅವುಗಳ ಜೀವನ ಪರಿಸರವನ್ನು ಬರೆದಿದ್ದಾರೆ ಪ್ರಾಣಿ ಸಮಾಜದ ವೈಶಿಷ್ಟತೆ, ವ್ಯವಸ್ಥೆ, ಜೀವನ ಕ್ರಮ, ಪ್ರಾಣಿ-ಮನುಷ್ಯ ಮಧ್ಯೆದ ಸ್ನೇಹ, ಪ್ರಾಣಿಯಲ್ಲಿರುವ ಕ್ರೌರ್ಯ, ಸ್ನೇಹ, ಅವುಗಳ ಬಳಗದಲ್ಲಿಯ ಸ್ಥಾನಮಾನಗಳ ವ್ಯವಸ್ಥೆ, ಪಕ್ಷಿಗಳ ಪ್ರಣಯ, ದಾಂಪತ್ಯ ಜೀವನ, ಸಾಕು ಪ್ರಾಣಿ-ಪಕ್ಷಿಗಳು ಹೀಗೆ ಎಲ್ಲವನ್ನೂ ನಿರೂಪಿಸಿದ್ದು ಬರವಣಿಗೆ ಮಾತ್ರವಲ್ಲ; ಸಂಗ್ರಹಿಸಿದ ಮಾಹಿತಿಯು ಬೆರಗು ಹುಟ್ಟಿಸುತ್ತದೆ. ಸ್ವತಃ ಲೇಖಕರು ಬಿಡಿಸಿದ ಚಿತ್ರಗಳು ಓದುಗರ ಗಮನ ಸೆಳೆಯುತ್ತವೆ. ಈ ಪುಸ್ತಕವು ಕೇವಲ ಮಕ್ಕಳಲ್ಲದೇ ಜೀವ ಜಾಲದ ಬಗ್ಗೆ ಆಸಕ್ತಿ ಇರುವ ಎಲ್ಲ ವಯೋಮಾನದವರು ಓದಬಹುದಾದ ಪುಸ್ತಕ.
ಕಾರ್ಗಲ ಕಾಲೊನಿಯ ರವೀಂದ್ರ ಪುಸ್ತಕಾಲಯವು 1984ರಲ್ಲಿ (ಪುಟ: 92) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2024 Book Brahma Private Limited.