ಇದು ಕೊಡಗಿನ ಪಕ್ಷಿ ಸಂಕುಲದ ಮಾಹಿತಿಯ ಕೈ ಪಿಡಿಯಾಗಿದೆ. 310 ಪ್ರಭೇದಗಳ ಸಚಿತ್ರ ವಿವರಣೆ ಇಲ್ಲಿದೆ. ಈ ಕೃತಿಯ ವಿಶೇಷವೆಂದರೆ, ಪಕ್ಷಿಗಳ ಕುರಿತಂತೆ ಇಲ್ಲಿ ಇಂಗ್ಲಿಷ್‌ನಲ್ಲೂ, ಕನ್ನಡ ದಲ್ಲೂ ಏಕಕಾಲದಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಇದು ಕೃತಿಯ ಎರಡನೆ ಪರಿಷ್ಕೃತ ವಿಸ್ತತ ಆವೃತ್ತಿಯಾಗಿದೆ. ಬರೀ 4,100 ಚದರ ಕಿ.ಮೀ. ವಿಸ್ತೀರ್ಣವುಳ್ಳ ಜಿಲ್ಲೆಯಾದ ಕೊಡಗು ಪ್ರಪಂಚದಲ್ಲಿಯೇ ಜೀವ ವೈವಿಧ್ಯಕ್ಕೆ ಹೆಸರಾದ ಪಶ್ಚಿಮಘಟ್ಟಗಳಿಂದಾವೃತವಾಗಿದೆ. ಕೊಡಗಿನ ಹಕ್ಕಿಗಳ ಕುರಿತಂತೆ ನೀವು ಪಡೆಯುವ ವಿವರಗಳು, ಆ ಪ್ರದೇಶದ ವೈವಿಧ್ಯವನ್ನೂ ಸಂಕೇತಿಸುತ್ತದೆ. ಎಲ್ಲ ಪಕ್ಷಿಗಳೂ ಎಲ್ಲ ಕಡೆಗಳಲ್ಲೂ ನೆಲೆಯೂರುವುದಿಲ್ಲ. ಒಂದು ಹಕ್ಕಿಯ ಬದುಕು, ಆಹಾರ ಕ್ರಮದ ಜೊತೆಗೆ ಆ ಪ್ರದೇಶ ಸಂಬಂಧವನ್ನು ಹೊಂದಿದೆ. ಆದುದರಿಂದ, ಯಾವ ಪ್ರದೇಶದಲ್ಲಿ ಯಾವ ಪ್ರಾಣಿ ಪಕ್ಷಿಗಳು ಹೆಚ್ಚಾಗಿವೆ ಎನ್ನುವುದರ ಆಧಾರದಲ್ಲಿ ಆ ಪರಿಸರದ ವೈಶಿಷ್ಟವನ್ನು ನಾವು ಗುರುತಿಸಬಹುದು. ಕೊಡಗಿನ ಒಟ್ಟು 310 ಪಕ್ಷಿ ಪ್ರಭೇದಗಳ ಚಿತ್ರಗಳು ಮತ್ತು ಮಾಹಿತಿಗಳನ್ನು, ಜೊತೆ ಜೊತೆಯಲ್ಲಿ ಒತ್ತಟ್ಟಿಗೆ ಕಾಣಬಹುದು. ಇದು ಆಯಾ ಕುಟುಂಬದ ಹಕ್ಕಿಗಳನ್ನು ಹೋಲಿಸಿ ನೋಡಲು ಮತ್ತು ಹೆಚ್ಚು ಶ್ರಮವಿಲ್ಲದೆ ಓದಲು ಸಹಕಾರಿಯಾಗಿದೆ.
©2024 Book Brahma Private Limited.