ಸಂಕೇತಿ ಸಮುದಾಯವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಹೊರಟಾಗ ಕರ್ನಾಟಕ-ತಮಿಳುನಾಡು-ಕೇರಳ ಈ ಮೂರೂ ರಾಜ್ಯಗಳಲ್ಲಿ ವ್ಯಾಪಕವಾಗಿ ಕ್ಷೇತ್ರಕಾರ್ಯ ಮಾಡಲಾಯಿತು. ಆ ಸಂದರ್ಭದಲ್ಲಿಯೇ ಸಂಕೇತಿಯೇತರ ಬ್ರಾಹ್ಮಣರನ್ನೂ ಬ್ರಾಹ್ಮಣೇತರರನ್ನೂ ಸಂದರ್ಶಿಸಿಕೊಳ್ಳಲಾಯಿತು. ಹೀಗೆ ಸಂಕೇತಿಯೇತರರು ಸಂಕೇತಿ ಸಮುದಾಯದ ಬಗೆಗೆ ಬರೆದ ಲೇಖನಗಳನ್ನು ಹುಡುಕಿ ಸಂಕಲಿಸಿದ ಕೃತಿ ‘ಸಂವಾದ’. ಈ ಕೃತಿಯಲ್ಲಿರುವ ಲೇಖನಗಳು 20ನೆಯ ಶತಮಾನವನ್ನು ವ್ಯಾಪಿಸಿವೆ. ಕಾರಂತ, ಮಾಸ್ತಿ, ನವರತ್ನ ರಾಮರಾಯರಂಥ ಅನುಭವಿಗಳು ಬರೆದ ಲೇಖನಗಳು ಇಲ್ಲಿ ಸೇರಿವೆ.
©2024 Book Brahma Private Limited.