ಮ್ಯಾಸ ಬ್ಯಾಡ ಎಂಬ ಬುಡಕಟ್ಟು ಸಮುದಾಯದ ಸಂಪೂರ್ಣ ಒಳನೋಟವನ್ನು ಈ ಕೃತಿಯೂ ಕಟ್ಟಿಕೊಡುತ್ತದೆ. ವ್ಯಾಪಕ ಕ್ಷೇತ್ರ ಕಾರ್ಯಗಳ ಅಧ್ಯಯನದಿಂದ ಈ ಕೃತಿ ಸಾಧ್ಯವಾಗಿವೆ. ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿ ಚಿಂತಕರಾದ “ಡಾ. ಮೀರಾಸಾಬಿಹಳ್ಳಿ ಶಿವಣ್ಣ”ನವರ ಬರಹದಲ್ಲಿರುವ ಜೀವಂತಿಕೆ ಮತ್ತು ಸೂಕ್ಷ್ಮ ವಿಮರ್ಶನ ದೃಷ್ಟಿಗಳು ಓದುಗರಿಗೆ ಹೊಸತರವನ್ನು ಪರಿಚಯಿಸುತ್ತದೆ. ಈ ಬರಹಗಳ ಕಟ್ಟು ನಮ್ಮ ನೆಲದ ಕನ್ನೆಭಾಗವನ್ನೂ, ಅದರ ಒಡಲಿನ ತಾಪವನ್ನೂ ವಿವರಿಸುತ್ತದೆ.
ಮ್ಯಾಸಮಂಡಲ- ಮೀರಾಸಾಬಿಹಳ್ಳಿ ಶಿವಣ್ಣ ಅವರು ರಚಿಸಿದ ಸಮುದಾಯ ಆಧಾರಿತ ವಿಮರ್ಶೆಗಳ ಸಂಕಲನ. ನಿಗದಿತ ಭೌಗೋಳಿಕ ವ್ಯಾಪ್ತಿಯೊಳಗೆ ಬದುಕುತ್ತಿರುವ ಕಾಡುಗೊಲ್ಲರು. ಕುಂಚಿಟಗರನ್ನು ಕುರಿತು ಒಂದೆರಡು ಲೇಖನಗಳಲ್ಲದೆ, ಈ ನೆಲದ ಸಾಂಸ್ಕೃತಿಕ ಮಹತ್ವವನ್ನು ಸಾರುವ ಕಲಾವಿದರು ಹಾಗೂ ಜನಪದ ಕಾವ್ಯ ಪ್ರಕಾರಗಳನ್ನು ಕುರಿತು ತಾತ್ವಿಕವಾಗಿ ಚಿಂತಿಸುವ ಲೇಖನಗಳು ಒಳಗೊಂಡಿವೆ.
ನಾಯಕ ಜನಾಂಗ-ಒಂದು ನೋಟ, ಮೊಳಕಾಲ್ಮೂರು ತಾಲ್ಲೂಕಿನ ಜಾನಪದ ನೆಲೆಗಳು, ಪಶುಪಾಲಕ ಮ್ಯಾಸ ಬೇಡರು, ನಾಯಕನ ಹಟ್ಟಿ ಪಾಳೆಗಾರರ ವಂಶಾವಳಿ-ಒಂದು ಪರಿಶೀಲನೆ, ನಾಯಕನ ಹಟ್ಟಿ ಪಾಳೆಯಗಾರನ ಕಾಲದ ನ್ಯಾಯಾಡಳಿತ, ಜಾನಪದ ನೆಲೆಯಲ್ಲಿ ಹಟ್ಟಿ ಜಾತ್ರೆ, ಜನಪದ ಸಾಹಿತ್ಯದಲ್ಲಿ ‘ಮದಕರಿ’ಪಾಳೆಗರರು, ಪಾಳೇಗಾರ ವೇಷ, ಚಿತ್ರದುರ್ಗ ಜಿಲ್ಲೆಯ ಜನಪದ ವೀರರು, ಚಳ್ಳಕೆರೆ ತಾಲ್ಲೂಕಿನ ಸಾಂಸ್ಕೃತಿಕ ಮಹತ್ವದ ತಾಣಗಳು, ಒಂದು ರೋಚಕ ಜನಪದ ಸಂಪ್ರದಾಯ-ಕಳಶ ಕೀಳೋದು, ತರಿಮರ, ಕುರುಬ ಮೂಲದ ಕುಂಚಿಟಿಗರ ಸಾಂಸ್ಕೃತಿಕ ವೀರ, ಚೌಡಿಕೆರಾಣಿ ಉಚ್ಚಂಗಮ್ಮ,ಕತೆಗಳ ಕಣಜ-ಈರಬಡಪ್ಪ, ಗಡಿನಾಡಿನ ಜನಪದ ಕಾವ್ಯ ಪ್ರಕಾರಗಳು, ಬುದಕಟ್ಟು ಅಭಿವೃದ್ಧಿ-ಒಂದು ಚಿಂತನೆ ವಿಷಯಗಳ ಕುರಿತು ಮಾಹಿತಿ ಒಳಗೊಂಡಿದೆ.
ಹೊಸತು -ಜನವರಿ-2005
ಒಂದು ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ತಿಳಿಸುವ ಸಂಶೋಧನ ಲೇಖನಗಳು. ಮೂಲದಲ್ಲಿ ಮ್ಯಾಸಬೇಡರು ಬೇಟೆ ಸಂಸ್ಕೃತಿಯವರಾದರೂ ಅವರ ಆಚರಣೆಗಳು ಮತ್ತು ಜೀವನಕ್ಕೆ ಸಂಬಂಧಿಸಿದ ದಾಖಲೆಗಳು ಕಾಡುಗೊಲ್ಲರ ಸಂಸ್ಕೃತಿಗೆ ತುಂಬ ಹತ್ತಿರವಿದ್ದುವು. ಕ್ಷೇತ್ರ ಕಾರ್ಯಗಳ ಮೂಲಕ ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ ಲೇಖಕರು ಮ್ಯಾಸಬೇಡರನ್ನು ಪಶುಪಾಲನಾ ವೃತ್ತಿಯಲ್ಲಿ ಪಳಗಿದವರೆಂದು ಗುರುತಿಸಿದ್ದಾರೆ. ಪ್ರಾಚೀನ ಬುಡಕಟ್ಟು ಜನಾಂಗಗಳು ಕ್ರಮೇಣ ವೃತ್ತಿ ಉಪವೃತ್ತಿಗಳೊಂದಿಗೆ ಇತರ ಪಂಗಡಗಳ ಜೊತೆ ಬೆರೆಯುತ್ತಾ ಹೊಸ ಹೊಸ ಸಂಸ್ಕೃತಿಗಳನ್ನು ನಿರ್ಮಾಣ ಮಾಡುತ್ತಾ ಸಾಗುತ್ತವೆ. ಹಾಗೆ ನೋಡಿದರೆ ಬೇಟೆಯೆಂಬುದು ಒಂದು ಮೂಲ ಮಾನವನ ಹೊಟ್ಟೆಪಾಡಿನ ವೃತ್ತಿಯೇ ಆಗಿತ್ತು. ನಮ್ಮ ನೆಲದ ಪದರು ಪದರುಗಳಲ್ಲೂ ಇಳಿದ ಜನಪದೀಯ ಬೇರುಗಳನ್ನು ಪರಿಚಯಿಸುತ್ತಿರುವ ಲೇಖಕರು ಅಭಿನಂದನಾರ್ಹರು.
©2024 Book Brahma Private Limited.