ಕರ್ನಾಟಕದ ಬುಡಕಟ್ಟು ಜನಾಂಗಗಳಲ್ಲಿ 'ಹಸಲರು' ಒಂದು ಪ್ರಮುಖ ಸಮುದಾಯ. ಹಸಲರು ಅಥವಾ ಹುಲಸವಾರರು ಹಿಂದಿನ ಕಾಲದಲ್ಲಿ ರಾಜ್ಯದ ಅರಣ್ಯಪ್ರದೇಶಗಳಲ್ಲಿ ಆಹಾರ ಹುಡುಕುತ್ತಾ ಅಲೆಯುತ್ತಿದ್ದ ಒಂದು ಪ್ರತ್ಯೇಕ ಬುಡಕಟ್ಟು ಪಂಗಡ.
ಇವರು ಸಾಂಪ್ರದಾಯಿಕವಾಗಿ ಬೇಟೆಗಾರರಾಗಿದ್ದರೂ ಕಾಫಿ, ಅಡಿಕೆ, ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲವರು ಬೇಸಾಯಗಾರರೂ, ಕೃಷಿ ಕಾರ್ಮಿಕರೂ, ಮೀನುಗಾರರೂ ಆಗಿದ್ದಾರೆ. ಜೀತ ನಿರ್ಮೂಲನೆ ಕಾನೂನು ಬರುವವರೆಗೆ ಹುಟ್ಟಾಳುಗಳಾಗಿದ್ದರು. ಈ ಕೃತಿಯಲ್ಲಿ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ಬರೆದಿದ್ದಾರೆ.
©2024 Book Brahma Private Limited.