ಲೇಖಕ ಎನ್. ಕೆ. ಮೋಹನ್ ರಾಂ ಅವರ ಕೃತಿ ʻಪ್ರವಾದಿ ಪೈಗಂಬರ್ ಕಾಲದ ಹುಸೇನಿ ಬ್ರಾಹ್ಮಣರುʼ. ಪುಸ್ತಕದಲ್ಲಿ ಹುಸೇನಿ ಬ್ರಾಹ್ಮಣರ ಬಗ್ಗೆ ಹೇಳಲಾಗಿದೆ. ಹುಸೇನಿಯರು ಪಂಜಾಬ್ ಪ್ರಾಂತ್ಯದಲ್ಲಿ ಬರುವ ಮೋಹ್ಯಾಲ್ ಎಂಬ ಸಮುದಾಯಕ್ಕೆ ಸೇರಿದವರು. ಕರಬಲ ಯುದ್ದದಲ್ಲಿ ಮೊಹಮ್ಮದ್ ಹುಸೈನರಿಗೆ ಬೆಂಬಲ ನೀಡಿದ ಬ್ರಾಹ್ಮಣ ಸಮುದಾಯದಕ್ಕೆ ಸೇರಿದ ಒಂದು ಪಂಗಡವನ್ನು ಹುಸೇನಿ ಬ್ರಾಹ್ಮಣರೆಂದು ಕರೆಯಲಾಗುತ್ತದೆ. ಇಸ್ಲಾಂ ಮತ್ತು ಹಿಂದು ಧರ್ಮವನ್ನು ಬೆಸೆಯುವಂಥ ಸಂಸ್ಕೃತಿ ಹೊಂದಿರುವ ಈ ಸಮುದಾಯವು, ಪ್ರಮುಖವಾಗಿ ಪಾಕಿಸ್ಥಾನದ ಸಿಂಧ್ ಪ್ರಾಂತ್ಯ, ಭಾರತದ ಪಂಜಾಬ್, ರಾಜಸ್ತಾನ, ದೆಹಲಿ, ಮಹಾರಾಷ್ಟ್ರಗಳಲ್ಲಿ ನೆಲೆಗೊಂಡಿದೆ.
©2025 Book Brahma Private Limited.