ಗೋಸಂಗಿ’ ಎಂಬ ಹಿಂದುಳಿದ ಅಲೆಮಾರಿ ಸಮುದಾಯದ ಬಗ್ಗೆ ಅಪ್ಪಾಜಿ ಎಸ್ ಸಿಂಧೆ ಮತ್ತು ಕೆ ಚವಾಡೆ ಲೋಕೇಶ್ ಅವರು ಈ ಕೃತಿಯಲ್ಲಿ ಬರೆದಿದ್ದಾರೆ. ಅಲೆಮಾರಿ ಸಮುದಾಯಗಳು ಸಮಕಾಲೀನ ಸಂದರ್ಭದಲ್ಲಿ- ಒತ್ತಡದಲ್ಲಿ ಮೂಲೆ ಗುಂಪಾಗಿವೆ. ಸ್ವಂತ ಅಸ್ತಿತ್ವ ಹಾಗೂ ಯಾವುದೇ ನಿರ್ದಿಷ್ಟ ನೆಲೆ, ನಿವೇಶನ, ಭೂಮಿಕಾಣಿ, ಊರುಕೇರಿ ಇಲ್ಲದೆ ಅಲೆಯುವ ಈ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಿಂದಾಗಿ ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದಿವೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.