ವಾರ್ಷಿಕಾವರ್ತನ, ಜೀವನಾವರ್ತನ ಆಚರಣೆಗಳು ವಾಲ್ಮೀಕಿ ಸಮುದಾಯವನ್ನು ಕುರಿತಂತೆ ಹಾಗೂ ಬಾಗಲಕೋಟೆಯ ಪರಿಸರದ ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳನ್ನು ಕುರಿತಂತೆ ವಿವರವಾಗಿ ಇಲ್ಲಿ ಚರ್ಚಿಸಲಾಗಿದೆ. ಅಲ್ಲದೆ ಅಥಣಿ ಪರಿಸರದಲ್ಲಿ ವಾಸಿಸುವ ಬೇಡ ಸಮುದಾಯಕ್ಕೆ ಸಂಬಂಧಿಸಿದ ವಿಧಿ ವಿಧಾನಗಳನ್ನು, ದೈವ . ನಂಬಿಕೆಗಳು, ಜಾತ್ರೆ ಉತ್ಸವಗಳನ್ನು ಇಲ್ಲಿ ಪರಿಚಯಿಸಲಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಸಮಾಜದ ಇತರ ಸಮುದಾಯಗಳೊಡನೆ ಇರುವ ಸಾಮರಸ್ಯ, ಬಾಂಧವ್ಯ ಮತ್ತು ಒಡನಾಟದ ಅಂಶಗಳ ಬಗ್ಗೆಯೂ ಈ ಕೃತಿಯಲ್ಲಿ ಮಹತ್ವದ ಮಾಹಿತಿಗಳಿವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಅಥಣಿ ಪರಿಸರದ ಚಾರಿತ್ರಿಕ ನೆಲೆಗಳು ಸ್ಥಳನಾಮಗಳು ಐತಿಹ್ಯಗಳು ,ಅಥಣಿ ಪರಿಸರದ ಜಾನಪದೀಯ ನೆಲೆಗಳು ಜನಪದ ಕಲೆಗಳು ಧಾರ್ಮಿಕ ನೆಲೆಗಳು ,ಅಥಣಿ ಪರಿಸರದ ಸಾಮಾಜಿಕ ಸ್ಥಿತಿಗತಿಗಳು, ಆರ್ಥಿಕ ಸ್ಥಿತಿಗತಿಗಳು; ಮಹಿಳಾ ಸ್ಥಿತಿಗತಿ ,ಅಥಣಿ ಪರಿಸರದ ಶೈಕ್ಷಣಿಕ ಸ್ಥಿತಿಗತಿ, ಕನ್ನಡ ಮತ್ತು ಮರಾಠಿ ಬಾಂಧವ್ಯ ,ಅಥಣಿ ಪರಿಸರದ ರಾಜಕೀಯ ಸ್ಥಿತಿಗತಿ ,ಅಥಣಿ ಪರಿಸರದ ವಾಲ್ಮೀಕಿ ಸಮುದಾಯದ ಜನಪದ ಸಾಹಿತ್ಯ,
©2024 Book Brahma Private Limited.