‘ಎಲ್ಲಮ್ಮ’ (ಹಯ್ದರಬಾದ ಕರ್ನಾಟಕ ಸಾಲು: ಸಂಪುಟ 7) ಪ್ರೊ. ಬಸವರಾಜ ಕೋಡಗುಂಟಿ ಅವರು ಯೋಜಕರು ಮತ್ತು ಸಂಪಾದಕರಾಗಿದ್ದ ‘ಹಯ್ದರಾಬಾದ ಕರ್ನಾಟಕ ಸರಣಿ’ಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯಲ್ಲಿ ಒಟ್ಟು 25 ಲೇಖನಗಳು ಸಂಕಲನಗೊಂಡಿವೆ. ಹುಲಿಗಿ, ಹಲಸಿ, ಬೂದನೂರು, ಕುಕನೂರು, ಈಚನಾಳ, ಮಯ್ನಳ್ಳಿ ಮುಂತಾದ ಹಲವು ಪ್ರದೇಶಗಳ ಯಲ್ಲಮ್ಮ, ದುರ್ಗಾದೇವಿ, ಸುಂಕಲಮ್ಮ, ಬುಡ್ಡಮ್ಮ ಮುಂತಾದ ಕೇಂದ್ರಗಳ ಹೆಣ್ಣು ದೇವರುಗಳನ್ನು ಕುರಿತು ಅಧ್ಯಯನ ಮಾಡಲಾಗಿದೆ. ಈ ನೆಲದಲ್ಲಿ ಹಲವಾರು ಹೆಣ್ಣುದೇವತೆಗಳ ಹೆಸರುಗಳು ಇವೆ. ಅವುಗಳಲ್ಲಿ ‘ಎಲ್ಲಮ್ಮ’ ಎಂಬುದು ಇತರೆ ಹೆಸರುಗಳಿಗಿಂತ ವಿಸ್ತಾರತೆಯನ್ನೂ ಪ್ರಾದೇಶಿಕತೆಯನ್ನೂ ಹೆಚ್ಚಾಗಿ ಪಡೆದಿರುವುದರಿಂದ ಅದೇ ಹೆಸರನ್ನು ಇಲ್ಲಿ ಪ್ರಾತಿನಿಧಿಕವಾಗಿ ಇಟ್ಟುಕೊಳ್ಳಲಾಗಿದೆ. ಎಲ್ಲಮ್ಮನಿಗೆ ಸಂಬಂಧಿಸಿದಂತೆ ಹಲವಾರು ಕತೆಗಳೂ ಐತಿಹ್ಯಗಳೂ ಪುರಾಣಗಳೂ ಇವೆ. ಇವುಗಳಲ್ಲಿ ಪರಶುರಾಮನ ತಾಯಿ ಯಲ್ಲಮ್ಮಳ ಕತೆಯು ಜನಪ್ರಿಯವಾದುದಾಗಿದೆ. ಇನ್ನೂ ಇದರಂತೆಯೇ ಜನಪ್ರಿಯವಾಗದೇ ಇರುವ ಹಲವು ಕತೆಗಳನ್ನೂ ವಿಚಾರಗಳನ್ನೂ ದಾಖಲಿಸುವ ಪ್ರಯತ್ನವನ್ನು ಈ ಸಂಪುಟದಲ್ಲಿ ಮಾಡಲಾಗಿದೆ.
©2024 Book Brahma Private Limited.