ಕಮ್ಮಾರ, ಬಡಿಗ, ಅಕ್ಕಸಾಲಿಗ, ಶಿಲ್ಪಿ ಹಾಗೂ ಕಂಚುಗಾರ ಇವರು ವಿಶ್ವಕರ್ಮರು, ಪಾಂಚಾಳರು, ವಿಶ್ವಬ್ರಾಹ್ಮಣರು, ಪಂಚಕರ್ಮಿಯರು, ಆಚಾರಿ ಮುಂತಾದ ಹೆಸರುಗಳಿಂದ ಗುರುತಿಸಿಕೊಂಡು ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಸಂಸ್ಕೃತದಲ್ಲಿ ಪಂಚ ಎಂದರೆ ಐದು ಎಂದು ಅರ್ಥ. ಕಬ್ಬಿಣ, ಕಟ್ಟಿಗೆ, ಬೆಳ್ಳಿ, ಕಂಚು, ಬಂಗಾರ, ಕಲ್ಲು ಹಾಗೂ ಕಂಚು ಇವುಗಳಿಂದ ವಸ್ತು ಉತ್ಪನ್ನಗಳನ್ನು ಮಾಡುವ ವೃತ್ತಿಯ ಸಮುದಾಯವೇ ಪಾಂಚಾಳ. ಈ ಪದ ಐದು ವೃತ್ತಿಗಳನ್ನು ಒಟ್ಟಿಗೆ ಸೇರಿಸಿ ಹೇಳುತ್ತದೆ. ಇಂತಹ ಸಮುದಾಯದ ಬಗ್ಗೆ ಶಾಸನ, ಜಾನಪದ ಹಾಗೂ ಸಾಹಿತ್ಯ ಕೃತಿಗಳಲ್ಲಿ ಸಮುದಾಯದ ರೀತಿ ನೀತಿಗಳನ್ನು ಕುರಿತು ಉಲ್ಲೇಖವಾಗಿರುವುದನ್ನು ಕಾಣಬಹುದು. ಕೃತಿಯಲ್ಲಿ ಪಾಂಚಾಳರ ಪರಿಚಯ ನೀಡಲಾಗಿದೆ.
©2024 Book Brahma Private Limited.